'ನಮ್ಮ ಮೋದಿ' ಫೇಸ್ಬುಕ್ ಪುಟದಲ್ಲಿ ಸಿಎಂ ಸಿದ್ದರಾಮಯ್ಯ ಪಾಕ್‌ ಧ್ವಜ ಹಿಡಿದ AI ವಿಡಿಯೋ ಪೋಸ್ಟ್‌; ಕ್ರಮಕ್ಕೆ ಆಗ್ರಹ

Update: 2025-04-28 18:05 IST
ನಮ್ಮ ಮೋದಿ ಫೇಸ್ಬುಕ್ ಪುಟದಲ್ಲಿ ಸಿಎಂ ಸಿದ್ದರಾಮಯ್ಯ ಪಾಕ್‌ ಧ್ವಜ ಹಿಡಿದ AI ವಿಡಿಯೋ ಪೋಸ್ಟ್‌; ಕ್ರಮಕ್ಕೆ ಆಗ್ರಹ
  • whatsapp icon

ಬೆಂಗಳೂರು: ಎಐ ತಂತ್ರಜ್ಞಾನ ಬಳಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಬಾವುಟ ಹಿಡಿದು ನೃತ್ಯ ಮಾಡುತ್ತಿರುವ ರೀತಿಯಲ್ಲಿ ಒಂದು ವಿಡಿಯೋ ಸೃಷ್ಟಿಸಿ ʼನಮ್ಮ ಮೋದಿʼ ಎಂಬ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿ ವಿಕೃತಿ ಮೆರೆಯಲಾಗಿದೆ.

2 ಲಕ್ಷ ಚಂದಾದಾರರಿರುವ ಈ ಫೇಸ್ ಬುಕ್ ಪುಟದಲ್ಲಿನ ವೀಡಿಯೊ ವೈರಲ್ ಆಗಿದೆ. ಪೋಸ್ಟ್ ಗೆ ಹಲವು ಪ್ರತಿಕ್ರಿಯೆಗಳು ಬಂದಿದೆ.

ರಾಜ್ಯದ ಮುಖ್ಯಮಂತ್ರಿಯೋರ್ವರ ಕೈಗೆ ಪಾಕಿಸ್ತಾನದ ಧ್ವಜ ಕೊಟ್ಟಿರುವಂತೆ AI ವೀಡಿಯೊ ಸೃಷ್ಟಿಸಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ರಾಜ್ಯದ ಮುಖ್ಯಮಂತ್ರಿಗಳನ್ನು ಗುರಿಪಡಿಸಿ ಹೀಗೆ ವಿಕೃತ ನಕಲಿ ವಿಡಿಯೋಗಳನ್ನು ನಡೆಸುತ್ತಿರುವವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆ, ಸೈಬರ್ ಅಪರಾಧ ವಿಭಾಗಕ್ಕೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News