ನಕಲಿ ಆಧಾರ್ ಕಾರ್ಡ್ ಗಾಗಿ ಪ್ರಾಣಿಗಳ ಅಕ್ಷಿಪಟಲ ಬಳಕೆ ಆರೋಪ: ಸಿಬಿಐ ತನಿಖೆಗೆ ಆಗ್ರಹ

Update: 2024-07-21 02:22 GMT

ಸಾಂದರ್ಭಿಕ ಚಿತ್ರ PC: PTI

ಜೈಪುರ: ಪಾಕಿಸ್ತಾನದ ಗಡಿಭಾಗದ ಸಾಂಚೋರ್ ಮತ್ತು ಇತರ ಜಿಲ್ಲೆಗಳಲ್ಲಿ ನಕಲಿ ಆಧಾರ್ ಕಾರ್ಡ್ ಗಳನ್ನು ಪಡೆಯುವ ಸಲುವಾಗಿ ಪ್ರಾಣಿಗಳ ಅಕ್ಷಿಪಟಲ ಮತ್ತು ಬಯೋಮೆಟ್ರಿಕ್ಸ್ ಗಾಗಿ ಕಾಲು ಬೆರಳಿನ ಗುರುತು ಬಳಸಲಾಗಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ರಾಜಸ್ಥಾನ ಸರ್ಕಾರ ಆಗ್ರಹಿಸಿದೆ.

ರಾಜ್ಯ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೋಗರಾಂ ಪಟೇಲ್ ಈ ಬಗ್ಗೆ ಹೇಳಿಕೆ ನೀಡಿ, ನಕಲಿ ಆಧಾರ್ ಕಾರ್ಡ್ ಗಳನ್ನು ಪತ್ತೆ ಮಾಡುವ ಸಲುವಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.

ರಾಣಿವಾಡ ಕಾಂಗ್ರೆಸ್ ಶಾಸಕ ರತನ್ ದೇವಸಿ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ನಿಲುವಳಿ ಸೂಚನೆಯ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ. ನಕಲಿ ಆಧಾರ್ಕಾರ್ಡ್ ಗಳನ್ನು ಸೃಷ್ಟಿಸುವ ಸಲುವಾಗಿ ಪ್ರಾಣಿಗಳ ಅಕ್ಷಿಪಟಲಗಳನ್ನು ಬಳಸಲಾಗಿದೆ ಎಂದು ಅವರು ಆಪಾದಿಸಿದ್ದರು. ಜತೆಗೆ 200 ರೂಪಾಯಿಗೆ ಶಾಲಾಮಕ್ಕಳ ಬೆರಳಚ್ಚುಗಳನ್ನು ಕೂಡಾ ಸಂಗ್ರಹಿಸಲಾಗಿದೆ. ಅಕ್ಷಿಪಟಲ ಸ್ಕ್ಯಾನರ್ ಗಳನ್ನು ಬುಡಮೇಲು ಮಾಡಿ ಬಳಕೆ ಮಾಡಲಾಗಿದೆ ಎಂದೂ ಅವರು ಆಪಾದಿಸಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ 14 ಇ-ಮಿತ್ರಾ/ಆಧಾರ್ ಆಪರೇಟರ್ ಗಳ ಯಂತ್ರಗಳನ್ನು ವಶಪಡಿಸಿಕೊಂಡು, ಅವರ ನೋಂದಣಿ ರದ್ದುಪಡಿ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News