ಆಂಧ್ರಪ್ರದೇಶ | 45 ದಿನಗಳಲ್ಲಿ ನಾಲ್ಕು ಲಕ್ಷ ಕೋಳಿಗಳ ಸಾವು, ಹಕ್ಕಿಜ್ವರದ ಶಂಕೆ

Update: 2025-02-05 20:39 IST
ಆಂಧ್ರಪ್ರದೇಶ | 45 ದಿನಗಳಲ್ಲಿ ನಾಲ್ಕು ಲಕ್ಷ ಕೋಳಿಗಳ ಸಾವು, ಹಕ್ಕಿಜ್ವರದ ಶಂಕೆ

ಸಾಂದರ್ಭಿಕ ಚಿತ್ರ | PC : PTI

  • whatsapp icon

ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಳೆದ 45 ದಿನಗಳಲ್ಲಿ ಸುಮಾರು ನಾಲ್ಕು ಲಕ್ಷ ಕೋಳಿಗಳು ಮೃತಪಟ್ಟಿವೆ. ಸಾವುಗಳಿಗೆ ಕಾರಣವನ್ನು ತಿಳಿದುಕೊಳ್ಳಲು ಪಶು ಸಂಗೋಪನಾ ಇಲಾಖೆಯು ಸತ್ತ ಕೋಳಿಗಳ ಮಾದರಿಗಳನ್ನು ಪರೀಕ್ಷೆಗೆ ರವಾನಿಸಿದೆ. ಕೋಳಿಗಳ ಸಾವುಗಳಲ್ಲಿ ಇತರ ಕಾರಣಗಳ ಜೊತೆಗೆ ಹಕ್ಕಿಜ್ವರದ ಪಾತ್ರವನ್ನೂ ಅಧಿಕಾರಿಗಳು ಶಂಕಿಸಿದ್ದಾರಾದರೂ ಪ್ರಯೋಗಾಲಯದ ವರದಿಗಳು ಕೈಸೇರಿದ ಬಳಿಕವಷ್ಟೇ ದೃಢಪಡಬೇಕಿದೆ.

ಮೃತ ಕೋಳಿಗಳ ಮಾದರಿಗಳನ್ನು ಭೋಪಾಲ ಮತ್ತು ವಿಜಯವಾಡಾದಲ್ಲಿಯ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಪಶು ಸಂಗೋಪನಾ ಇಲಾಖೆಯ ನಿರ್ದೇಶಕ ದಾಮೋದರ ನಾಯ್ಡು ಅವರು, ಸಾವುಗಳು ಸಂಭವಿಸುತ್ತಿವೆಯಾದರೂ ರೈತರು ಹೇಳಿಕೊಳ್ಳುತ್ತಿರುವ ಪ್ರಮಾಣದಲ್ಲಿ ಅಲ್ಲ. ರೈತರು ಜೈವಿಕ ಸುರಕ್ಷತಾ ಕ್ರಮಗಳನ್ನೂ ನಿರ್ಲಕ್ಷಿಸುತ್ತಿದ್ದು,ಇದು ಕಾಯಿಲೆಗಳ ಹರಡುವಿಕೆಗೆ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.

ಕೆಲವು ರೈತರು ಸತ್ತ ಕೋಳಿಗಳನ್ನು ಕಾಲುವೆಗಳಲ್ಲಿ ಮತ್ತು ಬೀದಿಗಳಲ್ಲಿಯ ಕಸದ ತೊಟ್ಟಿಗಳಲ್ಲಿ ಎಸೆದಿದ್ದು,ಇದು ಸೋಂಕು ಹರಡಲು ಕಾರಣವಾಗಿದೆ. ಕನಿಷ್ಠ ಮುನ್ನೆಚ್ಚರಿಕೆಯನ್ನೂ ವಹಿಸದಿದ್ದರಿಂದ ಕೋಳಿಗಳು ಸಾವನ್ನಪ್ಪಿವೆ ಎಂದು ಅವರು ತಿಳಿಸಿದರು.

ನಾಯ್ಡು ಪ್ರಕಾರ ಸಾಮಾನ್ಯವಾಗಿ ಈ ವಿದ್ಯಮಾನವು ಋತುಮಾನಕ್ಕೆ ಅನುಗುಣವಾಗಿರುತ್ತದೆ ಮತ್ತು ಪ್ರತಿವರ್ಷವೂ ಕಾಣಿಸಿಕೊಳ್ಳುತ್ತದೆ. ಆದರೂ ವಲಸೆ ಹಕ್ಕಿಗಳ ಸಂಖ್ಯೆ ಹೆಚ್ಚಾಗಿರುವುದು ಮತ್ತು ರೈತನ ನಿರ್ಲಕ್ಷ್ಯ ಸಾವುಗಳು ಹೆಚ್ಚಲು ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News