ಅಮೆರಿಕದಲ್ಲಿ ಅನ್ಮೋಲ್ ಬಿಷ್ಣೋಯಿ ಬಂಧನ

Update: 2024-11-21 21:57 IST
Photo of  Anmol Bishnoi

ಅನ್ಮೋಲ್ ಬಿಷ್ಣೋಯಿ | PC : NDTV 

  • whatsapp icon

ಹೊಸದಿಲ್ಲಿ : ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿಯ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯಿಯನ್ನು ಅಮೆರಿಕದ ಕಾನೂನು ಜಾರಿ ಇಲಾಖೆ ಬಂಧಿಸಿದೆ ಹಾಗೂ ಆತನನ್ನು ಇಯೋವಾ ನಗರದ ಕಾರಾಗೃಹದಲ್ಲಿ ಇರಿಸಿದೆ ಎಂದು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ ಇಲಾಖೆ (ಐಸಿಪಿ) ತಿಳಿಸಿದೆ.

ಅನ್ಮೋಲ್ ಬಿಷ್ಣೋಯಿಯನ್ನು ಕಾರಾಗೃಹದಲ್ಲಿ ಇರಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಐಸಿಇಯ ಅಧಿಕೃತ ಹೇಳಿಕೆ ತಿಳಿಸಿದೆ. ವಿವಿಧ ಕ್ರಿಮಿನಲ್ ಚಟುವಟಿಕಗಳಲ್ಲಿ ಆತನ ಭಾಗವಹಿಸುವಿಕೆಯ ಕುರಿತು ತನಿಖೆ ನಡೆಯುತ್ತಿರುವ ನಡುವೆ ಅನ್ಮೋಲ್ ಬಿಷ್ಣೋಯಿಯನ್ನು ಬಂಧಿಸಲಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಭಾರತಕ್ಕೆ ಬೇಕಾಗಿರುವ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿಯ ಸಂಭಾವ್ಯ ಗಡಿಪಾರಿನ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕದ ವಿದೇಶಾಂಗ ಇಲಾಖೆ ಸೋಮವಾರ ನಿರಾಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News