ಮುಂದಿನ ಪೋಪ್ ಆಯ್ಕೆಗೆ ನೆರವಾಗಲಿರುವ ಮೊಟ್ಟ ಮೊದಲ ದಲಿತ ಕಾರ್ಡಿನಲ್ ಆಂಥೋನಿ ಪೂಲಾ

Update: 2025-04-22 08:30 IST
ಮುಂದಿನ ಪೋಪ್ ಆಯ್ಕೆಗೆ ನೆರವಾಗಲಿರುವ ಮೊಟ್ಟ ಮೊದಲ ದಲಿತ ಕಾರ್ಡಿನಲ್ ಆಂಥೋನಿ ಪೂಲಾ

ಆಂಥೋನಿ ಪೂಲಾ 

PC: x.com/ThePrintIndia

  • whatsapp icon

ಹೊಸದಿಲ್ಲಿ: ಪೋಪ್ ಫ್ರಾನ್ಸಿಸ್ ನಿಧನದ ಬಳಿಕ ಕ್ಯಾಥೊಲಿಕ್ ಚರ್ಚ್ ಗಳ ಮುಂದಿನ ಮುಖ್ಯಸ್ಥರನ್ನು ನಾಲ್ಕು ಮಂದಿ ಕಾರ್ಡಿನಲ್ ಗಳು ಆಯ್ಕೆ ಮಾಡಲಿದ್ದಾರೆ. ಈ ಪೈಕಿ ಮೊಟ್ಟಮೊದಲ ಬಾರಿಗೆ ಭಾರತದ ದಲಿತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕಾರ್ಡಿನಲ್ ಆಂಥೋನಿ ಪೂಲಾ ಸೇರಿದ್ದಾರೆ.

ಹೈದರಾಬಾದ್ ಆರ್ಚ್ ಬಿಷಪ್ ಆಗಿರುವ ಪೂಲಾ, ಕಾರ್ಡಿನಲ್-ಧರ್ಮಗುರುವಾಗಿ ನೇಮಕಗೊಂಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು 2022ರ ಆಗಸ್ಟ್ 27ರಂದು ಕಾರ್ಡಿನಲ್ ಗಳನ್ನು ನೇಮಕ ಮಾಡಿದ್ದರು. ಕ್ಯಾಥೊಲಿಕ್ ಚರ್ಚ್ ಮುಖ್ಯಸ್ಥರಾಗಿ ಆಯ್ಕೆಯಾಗಲಿರುವ ಧರ್ಮಗುರುವನ್ನು ಆಯ್ಕೆ ಮಾಡುವ ಅರ್ಹತೆ ಪಡೆದ 80 ವರ್ಷಕ್ಕಿಂತ ಕಿರಿಯ ವಯಸ್ಸಿನ 138 ಕಾರ್ಡಿನಲ್ ಗಳ ಪೈಕಿ ಪೂಲಾ ಏಕೈಕ ದಲಿತ ಕ್ರಿಶ್ಚಿಯನ್ನರಾಗಿದ್ದಾರೆ.

ಮುಂದಿನ ಪೋಪ್ ಆಯ್ಕೆ ಮಾಡುವ ಪೂಲಾ ಅವರ ಹೊಣೆಗಾರಿಕೆ ಜಾಗತಿಕ ಮಹತ್ವವನ್ನು ಪಡೆದಿದೆ. ಇದು ಭಾರತದ ದಲಿತ ಕ್ರಿಶ್ಚಿಯನ್ ಸಮುದಾಯಕ್ಕೂ ಮಹತ್ವದ ಅಂಶವಾಗಿದೆ. ಶತಮಾನಗಳ ಕಾಲ ದಮನಕ್ಕೆ ಒಳಗಾದ ಸಮುದಾಯದಿಂದ ಬಂದಿರುವ ಪೂಲಾ ಅವರ ವ್ಯಾಟಿಕನ್ ಪಯಣ ಮೇಲ್ವರ್ಗದ ನಾಯಕತ್ವದ ಪ್ರಾಬಲ್ಯವಿರುವ ಪರಿಸರದಲ್ಲಿ ವಿಶಿಷ್ಟ ಎನಿಸಿದೆ.

"ಆಂಥೋನಿ ಪೂಲಾ ಅವರನ್ನು ಕಾರ್ಡಿನಲ್ ಆಗಿ ಅಯ್ಕೆ ಮಾಡಿದಾಗ ದಲಿತ ಕ್ರಿಶ್ಚಿಯನ್ ಸಮುದಾಯ ಅತ್ಯಂತ ಸಂತಸ ವ್ಯಕ್ತಪಡಿಸಿತ್ತು. ಇದೀಗ ಮುಂದಿನ ಪೋಪ್ ಅಯ್ಕೆಯಲ್ಲಿ ಅವರ ಸಣ್ಣ ಕೊಡುಗೆಯು ಮಹತ್ವದ ಸಾಧನೆ" ಎಂದು ದಲಿತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜಾಲತಾಣ ಮುಖಂಡ ಹಾಗೂ ಕ್ಸೇವಿಯರ್ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ರಿಸರ್ಚ್ ಮುಖ್ಯಸ್ಥ ಡಾ.ಪ್ರಕಾಶ್ ಲೂಯಿಸ್ ಹೇಳಿದ್ದಾರೆ.

ಪೂಲಾ 1961ರ ನವೆಂಬರ್ 15ರಂದು ಕರ್ನೂಲ್ ಧರ್ಮಪ್ರಾಂತ್ಯದ ಬಡದಲಿತ ಕುಟುಂಬದಲ್ಲಿ ಜನಿಸಿದರು. ಜಾತಿ ಆಧರಿತ ತಾರತಮ್ಯಕ್ಕೆ ಒಳಗಾಗಿದ್ದ ಅವರ ಪ್ರತಿಭೆ ಡಚ್ ಮಿಷನರಿ ಆಯೋಜಿಸಿದ್ದ ಬೇಸಿಗೆ ಶಿಬಿರವೊಂದರಲ್ಲಿ ಅನಾವರಣಗೊಂಡಿತು. ಗಾಡಿವೆಮುಲಾ ಜಿಲ್ಲಾಪಂಚಾಯ್ತಿ ಶಾಲೆಯಲ್ಲಿ ಶಿಕ್ಷಣ ಪಡೆದ ಅವರು ಸೈಂಟ್ ಮೇರಿ ಹೈಸ್ಕೂಲ್ ನಲ್ಲಿ ಉನ್ನತ ಶಿಕ್ಷಣ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News