ಪೋಕ್ಸೊ ಪ್ರಕರಣ: ಸುದ್ದಿ ನಿರೂಪಕರಾದ ಚಿತ್ರಾ ತ್ರಿಪಾಠಿ, ಸುಹೇಲ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

Update: 2024-11-28 15:21 IST
Photo of Chitra Tripati and Syed Suhail

ಚಿತ್ರಾ ತ್ರಿಪಾಠಿ, ಸೈಯದ್ ಸುಹೇಲ್‌ (Photo credit: X/@chitraaum, @SyyedSuhail)

  • whatsapp icon

ಹೊಸದಿಲ್ಲಿ: 2013ರ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತರಾದ ಚಿತ್ರಾ ತ್ರಿಪಾಠಿ ಮತ್ತು ಸೈಯ್ಯದ್ ಸುಹೇಲ್ ವಿರುದ್ಧ ಗುರುಗ್ರಾಮ್ ನ ನ್ಯಾಯಾಲಯವು ಜಾಮೀನು ರಹಿತ ಬಂಧನದ ವಾರಂಟ್ ಜಾರಿಗೊಳಿಸಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಶ್ವನಿ ಕುಮಾರ್ ಮೆಹ್ತಾ ಅವರ ನ್ಯಾಯಪೀಠವು, ಪತ್ರಕರ್ತರಾದ ಚಿತ್ರಾ ತ್ರಿಪಾಠಿ ಮತ್ತು ಸೈಯ್ಯದ್ ಸುಹೇಲ್ ಅವರಿಗೆ ಈ ಮೊದಲು ನೀಡಿದ್ದ ಜಾಮೀನನ್ನು ರದ್ದುಗೊಳಿಸಿದ್ದು, ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿಗೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

News 24, India News, and News Nation ಸುದ್ದಿ ವಾಹಿನಿಗಳು ಮಗು ಮತ್ತು ಆಕೆಯ ಕುಟುಂಬವೊಂದರ ವಿಡಿಯೋವನ್ನು ಎಡಿಟ್ ಮಾಡಿ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧ ಕಲ್ಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಮೂರು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 15 ಪತ್ರಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120B, 469, 471 ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News