ಅಯೋಧ್ಯೆ: ಮಹಿಳೆಯ ಸ್ನಾನದ ವಿಡಿಯೊ ಚಿತ್ರೀಕರಿಸಿದ ಹೋಟೆಲ್ ಸಿಬ್ಬಂದಿ ಬಂಧನ

Update: 2025-04-12 08:30 IST
ಅಯೋಧ್ಯೆ: ಮಹಿಳೆಯ ಸ್ನಾನದ ವಿಡಿಯೊ ಚಿತ್ರೀಕರಿಸಿದ ಹೋಟೆಲ್ ಸಿಬ್ಬಂದಿ ಬಂಧನ

PC: screengrab/x.com/HateDetectors

ಅಯೋಧ್ಯೆ: ರಾಮ ಮಂದಿರ ಪಕ್ಕದ ಅತಿಥಿಗೃಹದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೊ ಚಿತ್ರೀಕರಿಸಿದ ಆರೋಪದಲ್ಲಿ 25 ವರ್ಷದ ಹೋಟೆಲ್ ಸಿಬ್ಬಂದಿಯೊಬ್ಬನನ್ನು ಬಂಧಿಸಲಾಗಿದೆ.

ಪೊಲೀಸರು ಈತನ ಮೊಬೈಲ್ ಪರಿಶೀಲಿಸಿದಾಗ ಇತರ ಮಹಿಳೆಯರ ಹಲವು ವಿಡಿಯೊಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಸೌರಭ್ ತಿವಾರಿ, ಉತ್ತರ ಪ್ರದೇಶದ ಬಹರೀಚ್ ಜಿಲ್ಲೆಯವನು. ರಾಮಮಂದಿರ 3ನೇ ಪ್ರವೇಶದ್ವಾರದಿಂದ ಕೇವಲ 50 ಮೀಟರ್ ದೂರದಲ್ಲಿರುವ ರಾಜಾ ಗೆಸ್ಟ್ ಹೌಸ್ ನ ಗ್ರಾಹಕರು ಈತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದರು.

ಮುಂಜಾನೆ 6 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಾರಣಾಸಿಯಿಂದ ಬಂದಿದ್ದ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದಾಗ ನೆರಳು ಕಂಡು, ಟಿನ್ ಶೆಡ್ ನ ಮೇಲಿನಿಂದ ವಿಡಿಯೊ ಮಾಡುತ್ತಿರುವುದು ಪತ್ತೆಯಾಯಿತು.

ಭಯಗೊಂಡ ಮಹಿಳೆ ನೆರವಿಗಾಗಿ ಕೂಗಿಕೊಂಡು, ಸ್ನಾನಗೃಹದಿಂದ ಹೊರಬಂದರು. ಇತರ ಗ್ರಾಹಕರು ಇವರ ಆಕ್ರಂದನ ಕೇಳಿ ಅಲ್ಲಿಗೆ ಧಾವಿಸಿ ಆರೋಪಿಯನ್ನು ಹಿಡಿದರು. ಬಳಿಕ ರಾಮಜನ್ಮಭೂಮಿ ಪೊಲೀಸರಿಗೆ ಹಸ್ತಾಂತರಿಸಿದರು ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News