ದೇಶದ ಮೂಲಭೂತ ಆರ್ಥಿಕ | ಸವಾಲುಗಳನ್ನು ಮೋದಿ ಸರಕಾರ ನಿರ್ಲಕ್ಷಿಸುತ್ತಿದೆ : ಜೈರಾಮ್ ರಮೇಶ್

Update: 2024-08-06 16:36 GMT

ಜೈರಾಮ್ ರಮೇಶ್ | PC : PTI 

ಹೊಸದಿಲ್ಲಿ: ಗ್ರಾಹಕ ಬೇಡಿಕೆಯ ಬೆಳವಣಿಗೆಯಲ್ಲಿ ದುರ್ಬಲತೆ ವಾತಾವರಣವನ್ನು ಭಾರತೀಯ ಉದ್ಯಮ ವಲಯವು ಎದುರಿಸುತ್ತಿದ್ದು,ದೇಶದ ಆರ್ಥಿಕತೆಯ ಅತ್ಯಂತ ಮೂಲಭೂತ ಸವಾಲುಗಳನ್ನು ಗುರುತಿಸಲು ಮೋದಿ ಸರಕಾರವು ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

2024-25ನೇ ಸಾಲಿನ ವಿತ್ತೀಯ ವರ್ಷದಲಿ ಭಾರತೀಯ ಉದ್ಯಮ ವಲಯವು ಮಂದಗತಿಯ ಆರಂಭವನ್ನು ಕಂಡಿದೆ ಎಂದು ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಶೇರ್ ಮಾಡಿದ್ದಾರೆ.

ಮಾರಾಟ ಪ್ರಮಾಣದಲ್ಲಿ ಹೆಚ್ಚಳವಾದರೂ ಆದಾಯದ ಗಾತ್ರದಲ್ಲಿ ದೃಢವಾದ ಬೆಳವಣಿಗೆಯಾಗಿಲ್ಲ. ಕಾರ್ಪೊರೇಟ್ ತೆರಿಗೆ ಕಡಿತಗಳು, ಉತ್ಪಾದನೆಯೊಂದಿಗೆ ಜೋಡಿಸಲ್ಪಟ್ಟ ಪ್ರೋತ್ಸಾಹಧನಗಳು, ಕೆಲವೇ ಕಂಪೆನಿಗಳ ಏಕಸ್ವಾಮ್ಯತೆ ಇತ್ಯಾದಿ ಕಾರಣಗಳಿಂದಾಗಿ ಆದಾಯದಲ್ಲಿ ಕಂಪೆನಿಗಳ ಕುಸಿತವಾಗಿದೆ ಎಂದು

ದೇಶದ ಅತ್ಯಂತ ಮೂಲಭೂತ ಆರ್ಥಿಕ ಸವಾಲುಗಳನ್ನು , ಅಜೈವಿಕ ಪ್ರಧಾನಿಯವರ ಸರಕಾರವು ಗುರುತಿಸಲು ಹಾಗೂ ನಿಭಾಯಿಸಲು ನಿರಾಕರಿಸುತ್ತಿದೆ ಎಂದು ರಮೇಶ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News