ಬಿಹಾರ | ಎನ್‌ಕೌಂಟರ್‌ನಲ್ಲಿ 10 ಕ್ರಿಮಿನಲ್ ಪ್ರಕರಣಗಳ ಆರೋಪಿಯ ಹತ್ಯೆ

Update: 2024-12-14 16:00 GMT

PC : PTI 

ಪಾಟ್ನಾ : ಬಿಹಾರ ಮತ್ತು ಹರ್ಯಾಣಗಳಲ್ಲಿ ಬ್ಯಾಂಕ್ ಡಕಾಯಿತಿಗಳು ಸೇರಿದಂತೆ ಹತ್ತಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಆಕಾಶ್ ಯಾದವ್ ಅಲಿಯಾಸ್ ಅಜಯ್ ರಾಯ್ ಎಂಬಾತ ಪಾಟ್ನಾ ಜಿಲ್ಲೆಯಲ್ಲಿ ಪೋಲಿಸರೊಂದಿಗೆ ಗುಂಡಿನ ಕಾಳಗದಲ್ಲಿ ಕೊಲ್ಲಲ್ಪಟ್ಟಿದ್ದಾನೆ.

ಬುಧವಾರ ರಾತ್ರಿ ಜಕ್ಕನಪುರ ಪ್ರದೇಶದಲ್ಲಿ ರಾಜ್ಯ ಪೋಲಿಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಕ್ರಿಮಿನಲ್ ಗ್ಯಾಂಗ್ ಸದಸ್ಯರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ರಾಯ್ ಕೊಲ್ಲಲ್ಪಟ್ಟಿದ್ದಾನೆ. ಎಸ್‌ಟಿಎಫ್‌ನ ಓರ್ವ ಸಬ್-ಇನ್ಸ್‌ಪೆಕ್ಟರ್ ಕೂಡ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಡಿಜಿಪಿ ಅಮೃತ ರಾಜ್ ಅವರು ಶನಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಘಟನಾ ಸ್ಥಳದಿಂದ ಒಂದು ಪಿಸ್ತೂಲು, ಹಲವಾರು ಗುಂಡುಗಳು ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ರಾಯ್‌ನ ಸಹಚರರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News