ಬಿಹಾರ: ಪತ್ರಕರ್ತನ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು

Update: 2024-03-18 11:11 IST
ಬಿಹಾರ: ಪತ್ರಕರ್ತನ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು

Screengrab:X/@AnshumanSail

  • whatsapp icon

ನಳಂದ: ಅಪರಿಚಿತ ದುಷ್ಕರ್ಮಿಗಳು ಪತ್ರಕರ್ತನೋರ್ವನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಗುಂಡಿನ ದಾಳಿಗೆ ಗುರಿಯಾಗಿರುವ ಪತ್ರಕರ್ತನನ್ನು ದೀಪಕ್ ವಿಶ್ವಕರ್ಮ ಎಂದು ಗುರುತಿಸಲಾಗಿದೆ.

ಘಟನೆಯ ಕುರಿತು ವಿವರ ನೀಡಿರುವ ನಳಂದ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಿಶ್ರಾ, “ಪತ್ರಕರ್ತರಾದ ದೀಪಕ್ ವಿಶ್ವಕರ್ಮ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ದೊರೆತಿದೆ. ಪ್ರಾಥಮಿಕವಾಗಿ ಸ್ಥಳೀಯರು ಅವರು ಅಪಘಾತಕ್ಕೀಡಾದರು ಎಂದು ತಿಳಿಸಿದ್ದರು. ಆದರೆ, ದೀಪಕ್ ವಿಶ್ವಕರ್ಮ ಅವರ ಹೇಳಿಕೆಯ ಪ್ರಕಾರ, ಅವರ ಮೇಲೆ ಗುಂಡಿನ ದಾಳಿ ನಡೆದಿದೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನಾ ಸ್ಥಳದಿಂದ ಬುಲೆಟ್ ಕವಚವನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News