ಬ್ರಹ್ಮೋಸ್ ಏರೋಸ್ಪೇಸ್‌ನಲ್ಲಿ ಅಗ್ನಿವೀರರಿಗೆ ಮೀಸಲಾತಿ

Update: 2024-09-27 13:58 GMT

ಬ್ರಹ್ಮೋಸ್ ಏರೋಸ್ಪೇಸ್‌ |  PC ; theprint.in

ಹೊಸದಿಲ್ಲಿ : ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ ಅಲ್ಪಾವಧಿಯ ಸೇವೆ ಸಲ್ಲಿಸಿದ ಬಳಿಕ ನಿವೃತ್ತರಾಗುವ ಅಗ್ನಿವೀರರಿಗೆ ಉದ್ಯೋಗವನ್ನು ಮೀಸಲಿಡುವ ಮಹತ್ವದ ಉಪಕ್ರಮವನ್ನು ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ (ಬಿಎಪಿಎಲ್)ಸಂಸ್ಥೆಯು ಶುಕ್ರವಾರ ಘೋಷಿಸಿದೆ.

ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್‌ಯುಗಳು) ಹಾಗೂ ರಕ್ಷಣಾ ವಲಯದ ಸಾರ್ವಜನಿಕ ವಲಯದ ಸಂಸ್ಥೆಗಳು (ಡಿಪಿಎಸ್‌ಯುಗಳು) ಪೈಕಿ ಅಗ್ನಿವೀರರಿಗೆ ಮೀಸಲಾತಿಯನ್ನು ಪ್ರಕಟಿಸಿದ ಮೊತ್ತ ಮೊದಲ ಸಂಸ್ಥೆಯಾಗಿದೆ. ತಾಂತ್ರಿಕ ವಿಭಾಗದಲ್ಲಿ ಶೇ.15 ಹಾಗೂ ಆಡಳಿತ ಹಾಗೂ ಭದ್ರತಾ ವಿಭಾಗಗಳಲ್ಲಿ ಶೇ.50ರಷ್ಟು ಮೀಸಲಾತಿಯನ್ನು ಅದು ಪ್ರಕಟಿಸಿದೆ.

ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆಯಲ್ಲಿರುವ ಕನಿಷ್ಠ ಶೇ.15ರಷ್ಟು ತಾಂತ್ರಿಕ ಉದ್ಯೋಗಗಳಲ್ಲಿ ಅಗ್ನಿವೀರರನ್ನು ಭರ್ತಿ ಮಾಡಲಾಗುವುದು. ಇದರ ಜೊತೆಗೆ ಹೊರಗುತ್ತಿಗೆಯ ಕೆಲಸಗಳು ಸೇರಿದಂತೆ ಆಡಳಿತಾತ್ಮಕ ಹಾಗೂ ಭದ್ರತಾ ವಿಭಾಗಗಳಲ್ಲಿ ಶೇ.50ರಷ್ಟು ಉದ್ಯೋಗಗಳನ್ನು ಅಗ್ನಿವೀರರಿಗೆ ಮೀಸಲಿಡಲಾಗುವುದು. ಅಗ್ನಿವೀರರಿಗೆ ಹೊರಗುತ್ತಿಗೆಯನ್ನು ನೀಡುವ ಮೂಲಕ ಅವರನ್ನು ನಾಗರಿಕ ವೃತ್ತಿಗಳಲ್ಲಿ ಸೇರ್ಪಡೆಗೊಳಿಸುವುದಕ್ಕೆ ವ್ಯಾಪಕ ಅವಕಾಶವನ್ನು ಒದಗಿಸಲಿದೆ.

ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ ಸೇವೆಯ ಆನಂತರ ಅಗ್ನಿವೀರರಲ್ಲಿ ತಾವು ಕಾರ್ಯನಿರ್ವಹಿಸಿದ್ದ ಸೇನಾ ವೃತ್ತಿಯಲ್ಲಿ ಪರಿಣತಿಯೊಂದಿಗೆ ಶಿಸ್ತುಪ್ರಜ್ಞೆ ಹಾಗೂ ರಾಷ್ಟ್ರೀಯ ಮನೋಭಾವ ಮೂಡುತ್ತದೆ ಎಂದು ಬ್ರಹ್ಮೋಸ್ ಏರೋಸ್ಪೇಸ್‌ನ ಉಪ ಸಿಇಓ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ನಮ್ಮ ಶ್ರಮಿಕಪಡೆಗೆ ಸೇರ್ಪಡೆಗೊಳ್ಳಲು ಅಗತ್ಯವಿರುವ ಕುಶಲತೆಯನ್ನು ವ್ಯಕ್ತಿಗಳು ಹೊಂದುವುದನ್ನು ಅಗ್ನಿವೀರ್ ಯೋಜನೆಯು ಖಾತರಿಪಡಿಸುತ್ತದೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ಸ್ತರಗಳೆರಡರಲ್ಲೂ ಅಗ್ನಿಪಥ್‌ನಲ್ಲಿ ಸೇವೆ ಸಲ್ಲಿಸಿದವರು ಸೂಕ್ತವಾದ ಸೇವೆ ನೀಡಲಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.

ವೃತ್ತಿಪರ ನಂಟು ಹೊಂದರುವ 200ಕ್ಕೂ ಅಧಿಕ ಕೈಗಾರಿಕಾ ಪಾಲುದಾರಿಕಾ ಸಂಸ್ಥೆಗಳಲ್ಲಿಯೂ ಅಗ್ನಿವೀರರಿಗೆ ಶೇ.15ರಷ್ಟು ಮೀಸಲಾತಿಯನ್ನು ಒದಗಿಸುವಂತೆ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಉತ್ತೇಜಿಸಲಿದೆಯೆಂದು ಡಾ. ಸಂಜಯ್‌ಕುಮಾರ್ ಜೋಶಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News