ಕೆನಡಾ | ರಾಯಭಾರಿ ಮತ್ತು ಇತರ ರಾಜತಾಂತ್ರಿಕರನ್ನು ಹಿಂದೆಗೆದುಕೊಳ್ಳಲು ಭಾರತದ ನಿರ್ಧಾರ

Update: 2024-10-14 21:16 IST
ಕೆನಡಾ | ರಾಯಭಾರಿ ಮತ್ತು ಇತರ ರಾಜತಾಂತ್ರಿಕರನ್ನು ಹಿಂದೆಗೆದುಕೊಳ್ಳಲು ಭಾರತದ ನಿರ್ಧಾರ

PC : PTI 

  • whatsapp icon

ಹೊಸದಿಲ್ಲಿ : ಕೆನಡಾದಲ್ಲಿಯ ತನ್ನ ರಾಯಭಾರಿ ಮತ್ತು ಇತರ ‘ಉದ್ದೇಶಿತ’ ರಾಜತಾಂತ್ರಿಕರನ್ನು ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ತನಿಖೆಯೊಂದಿಗೆ ತಳುಕು ಹಾಕುವ ಪ್ರಯತ್ನಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಅವರನ್ನು ವಾಪಸ್ ಕರೆಸಿಕೊಳ್ಳಲು ಸೋಮವಾರ ನಿರ್ಧರಿಸಿದೆ.

ಇಲ್ಲಿಯ ಕೆನಡಾ ರಾಯಭಾರಿ ಕಚೇರಿಯ ಉಸ್ತುವಾರಿಯನ್ನು ಕರೆಸಿಕೊಂಡ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ನಿರ್ಧಾರವನ್ನು ಪ್ರಕಟಿಸಿದೆ.

ಕಾರ್ಯದರ್ಶಿ(ಪೂರ್ವ)ಗಳು ಕೆನಡಾದ ಚಾರ್ಜ್ ಡಿ ಅಫೇರ್ಸ್ ಅವರನ್ನು ಕರೆಸಿಕೊಂಡಿದ್ದು, ಕೆನಡಾದಲ್ಲಿರುವ ಭಾರತೀಯ ರಾಯಭಾರಿ, ಇತರ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಆಧಾರರಹಿತವಾಗಿ ಗುರಿಯಾಗಿಸಿಕೊಂಡಿದ್ದು ಎಳ್ಳಷ್ಟೂ ಸ್ವೀಕಾರಾರ್ಹವಲ್ಲ ಎಂದು ಅವರಿಗೆ ತಿಳಿಸಲಾಗಿದೆ ಎಂದು ಸಚಿವಾಲಯವು ಹೇಳಿದೆ.

‘ಉಗ್ರವಾದ ಮತ್ತು ಹಿಂಸಾಚಾರದ ವಾತಾವರಣದಲ್ಲಿ ಟ್ರುಡೊ ಸರಕಾರದ ಕ್ರಮಗಳು ಈ ಅಧಿಕಾರಿಗಳ ಸುರಕ್ಷತೆಯನ್ನು ಅಪಾಯಕ್ಕೀಡಾಗಿಸಿದೆ. ಅವರ ಸುರಕ್ಷತೆಯನ್ನು ಖಚಿತಪಡಿಸಲು ಪ್ರಸ್ತುತ ಕೆನಡಾ ಸರಕಾರದ ಬದ್ಧತೆಯ ಬಗ್ಗೆ ನಮಗೆ ನಂಬಿಕೆಯಿಲ್ಲ. ಆದ್ದರಿಂದ ತನ್ನ ರಾಯಭಾರಿ,ಇತರ ‘ಉದ್ದೇಶಿತ’ ರಾಜತಾಂತ್ರಿಕರು ಮತ್ತು ಇತರ ಅಧಿಕಾರಿಗಳನ್ನು ಹಿಂದೆಗೆದುಕೊಳ್ಳಲು ಭಾರತ ಸರಕಾರವು ನಿರ್ಧರಿಸಿದೆ’ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News