ಪ.ಬಂಗಾಳ, ಸಿಕ್ಕಿಂನ 50 ಸ್ಥಳಗಳಿಗೆ ಸಿಬಿಐ ದಾಳಿ, 24 ಮಂದಿ ವಿರುದ್ಧ ಪ್ರಕರಣ

Update: 2023-10-14 16:24 GMT

ಸಾಂದರ್ಭಿಕ ಚಿತ್ರ| Photo: PTI

ಹೊಸದಿಲ್ಲಿ : ನಕಲಿ ದಾಖಲೆಪತ್ರಗಳ ಆಧಾರದಲ್ಲಿ ಪಾಸ್‌ ಪೋರ್ಟ್ ಗಳನ್ನು ಮಾಡಿಸಿಕೊಡುತ್ತಿದ್ದ ಹಗರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ ಸಿಬಿಐ, ಗ್ಯಾಂಗ್ಟಕ್, ಕೋಲ್ಕತಾ, ಸಿಲಿಗುರಿ ಹಾಗೂ ಡಾರ್ಜಿಲಿಂಗ್ ಸೇರಿದಂತೆ 50ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಈ ಸಂಬಂಧ 24 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ.

ಆರೋಪಿಗಳಲ್ಲಿ 16 ಸರಕಾರಿ ಅಧಿಕಾರಿಗಳು ಕೂಡಾ ಸೇರಿದ್ದಾರೆಂದು ತಿಳಿದುಬಂದಿದೆ. ಈ ಸರಕಾರಿ ಅಧಿಕಾರಿಗಳು ಲಂಚ ಪಡೆದುಕೊಂಡು ನಕಲಿ ದಾಖಲೆಗಳ ಆಧಾರದಲ್ಲಿ ಪಾಸ್‌ ಪೋರ್ಟ್ ಗಳನ್ನು ಮಾಡಿಸಿ ಕೊಡುತ್ತಿದ್ದಾರೆಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಓರ್ವ ಪಾಸ್‌ ಪೋರ್ಟ್ ಅಧಿಕಾರಿ ಹಾಗೂ ಹಿರಿಯ ಆಧೀಕ್ಷಕರನ್ನು ಮುಖ್ಯ ಆರೋಪಿಗಳೆಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಿಕ್ಕಿಂನ ಗ್ಯಾಂಗ್ಟಕ್ ನಲ್ಲಿ ನಿಯೋಜಿತನಾಗಿದ್ದ ಓರ್ವ ಅಧಿಕಾರಿ ಹಾಗೂ ಇನ್ನೋರ್ವ ಮಧ್ಯವರ್ತಿಯನ್ನು ಕೂಡಾ ಬಂಧಿಸಲಾಗಿದೆಯೆಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News