ಅಮಿತ್ ಶಾ ಭಾಷಣ ಡಿಲಿಟ್ ಮಾಡಲು 'ಎಕ್ಸ್'ಗೆ ಸೂಚಿಸಿದ ಕೇಂದ್ರ ಸರ್ಕಾರ: ಕಾಂಗ್ರೆಸ್ ಆರೋಪ

Update: 2024-12-19 12:46 GMT

ಅಮಿತ್ ಶಾ | PTI 

ಹೊಸದಿಲ್ಲಿ: ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಾಡಿದ ಭಾಷಣವನ್ನು ಡಿಲಿಟ್ ಮಾಡುವಂತೆ ಬಿಜೆಪಿ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆ 'X' ಅನ್ನು ಕೇಳಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್‌ನ ಹೇಳಿಕೆಗಳ ಬಗ್ಗೆ ಬಿಜೆಪಿ ಅಥವಾ ಎಕ್ಸ್‌ ಸಂಸ್ಥೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ.

ಅಮಿತ್ ಶಾ ಅವರು "ಕ್ಷಮಿಸಲಾಗದ ಅಪರಾಧ" ಎಸಗಿದ್ದಾರೆ ಎಂದು ಕಾಂಗ್ರೆಸ್ ಪುನರುಚ್ಚರಿಸಿದ್ದು, ಗೃಹ ಸಚಿವರು ರಾಷ್ಟ್ರದ ಕ್ಷಮೆಯಾಚಿಸಬೇಕು ಹಾಗೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ಎಕ್ಸ್ ಖಾತೆಯಲ್ಲಿ ಹಂಚಲಾಗಿರುವ ಅಮಿತ್ ಶಾ ವರ ಭಾಷಣದ ತುಣುಕನ್ನು ಡಿಲಿಟ್ ಮಾಡುವಂತೆ ಕಾಂಗ್ರೆಸ್ ಪಕ್ಷದ ಅಧಿಕೃತ ಹ್ಯಾಂಡಲ್‌ಗೆ ಸೇರಿದಂತೆ ಪಕ್ಷದ ನಾಯಕರಿಗೆ ಎಕ್ಸ್ ಇಮೇಲ್ ಮಾಡಿದೆ ಎಂದು ಪಕ್ಷದ ವಕ್ತಾರೆ ಸುಪ್ರಿಯಾ ಸುಪ್ರಿಯಾ ಶ್ರಿನೇತ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News