ವಿವಾದಾತ್ಮಕ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಜಿಲ್ಲಾ ತರಬೇತಿ ಕಾರ್ಯಕ್ರಮವನ್ನು ತಡೆ ಹಿಡಿದ ಕೇಂದ್ರ ಸರಕಾರ

Update: 2024-07-16 13:46 GMT

ಪೂಜಾ ಖೇಡ್ಕರ್ | Credit: X/@DDNewslive

ಮುಂಬೈ: ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಕಲಿ ಅಂಗವೈಕಲ್ಯ ಪ್ರಮಾಣ ಪತ್ರ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ವಿವಾದಾತ್ಮಕ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಜಿಲ್ಲಾ ತರಬೇತಿ ಕಾರ್ಯಕ್ರಮಕ್ಕೆ ಮಂಗಳವಾರ ಕೇಂದ್ರ ಸರಕಾರ ತಡೆ ನೀಡಿದೆ.

ಜುಲೈ 23ರೊಳಗೆ ಮರಳಿ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅವರನ್ನು ಮರಳಿ ಕರೆಸಿಕೊಳ್ಳಲು ಅಕಾಡೆಮಿ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

ಖೇಡ್ಕರ್ ಅವರ ಜಿಲ್ಲಾ ತರಬೇತಿ ಕಾರ್ಯಕ್ರಮವನ್ನು ತಡೆ ಹಿಡಿಯಲು ಹಾಗೂ ಅವರನ್ನು ತಕ್ಷಣವೇ ಮತ್ತಷ್ಟು ಅಗತ್ಯ ಕ್ರಮ ಕೈಗೊಳ್ಳಲು ಅಕಾಡೆಮಿಗೆ ಮರಳಿ ಕರೆಸಿಕೊಳ್ಳಲು ಅಕಾಡೆಮಿ ನಿರ್ಧರಿಸಿದೆ ಎಂದು ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಪತ್ರದಲ್ಲಿ ನಮೂದಿಸಲಾಗಿದೆ.

ತಮಗೆ ಪ್ರತ್ಯೇಕ ಕಚೇರಿ ಬೇಕು ಹಾಗೂ ಅಧಿಕೃತ ಕಾರು ಬೇಕು ಎಂಬ ಬೇಡಿಕೆಗಳನ್ನಿಟ್ಟು, ತಮ್ಮ ಖಾಸಗಿ ಕಾರಿಗೆ ಅನಧಿಕೃತವಾಗಿ ಕೆಂಪು ದೀಪ ಅಳವಡಿಸಿಕೊಳ್ಳುವ ಮೂಲಕ 34 ವರ್ಷದ ಪೂಜಾ ಖೇಡ್ಕರ್ ಸುದ್ದಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News