ಮಹಿಳಾ ದಿನಾಚರಣೆ | ಪ್ರಧಾನಿಯ ಅಧಿಕೃತ ʼಎಕ್ಸ್‌ʼ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡ ಚೆಸ್ ಗ್ರ್ಯಾಂಡ್ ಮಾಸ್ಟರ್ ವೈಶಾಲಿ

Update: 2025-03-08 13:13 IST
ಮಹಿಳಾ ದಿನಾಚರಣೆ | ಪ್ರಧಾನಿಯ ಅಧಿಕೃತ ʼಎಕ್ಸ್‌ʼ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡ ಚೆಸ್ ಗ್ರ್ಯಾಂಡ್ ಮಾಸ್ಟರ್ ವೈಶಾಲಿ

ಆರ್. ವೈಶಾಲಿ (Photo: PTI)

  • whatsapp icon

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಹಿಳಾ ದಿನವಾದ ಶನಿವಾರ ಚೆಸ್ ತಾರೆ ಆರ್ ವೈಶಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಹಿಳೆಯರಿಗೆ ತಮ್ಮ ಕನಸುಗಳನ್ನು ಮುಂದುವರಿಸಲು ಪ್ರೋತ್ಸಾಹಿಸುವ ಸಲುವಾಗಿ ಪ್ರಬಲ ಸಂದೇಶವನ್ನು ರವಾನಿಸಿದರು.

ಆರನೇ ವಯಸ್ಸಿನಿಂದ ಚೆಸ್ ಆಡುತ್ತಿರುವ ವೈಶಾಲಿ ʼಗ್ರ್ಯಾಂಡ್ ಮಾಸ್ಟರ್’ ಪಟ್ಟ ಪಡೆದ ಭಾರತದ ಮೂರನೇ ಆಟಗಾರ್ತಿ. ಇವರು ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರ ಸಹೋದರಿಯಾಗಿದ್ದಾರೆ. ಗ್ರ್ಯಾಂಡ್ಮಾಸ್ಟರ್ ಆದ ವಿಶ್ವದ ಮೊದಲ ಸೋದರ–ಸೋದರಿ ಜೋಡಿ ಎಂಬ ಖ್ಯಾತಿಯನ್ನು ಪಡೆದಿದ್ದಾರೆ.

ನಮಸ್ಕಾರ! ನಾನು ವೈಶಾಲಿ, ನಮ್ಮ ಪ್ರಧಾನಮಂತ್ರಿ ನರೇಂದ್ರಮೋದಿ ಜಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಹಿಳಾ ದಿನದಂದು ಅಭಿಪ್ರಾಯ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ನಾನು ಚೆಸ್ ಆಡುತ್ತೇನೆ ಮತ್ತು ಅನೇಕ ಪಂದ್ಯಾವಳಿಗಳಲ್ಲಿ ನಮ್ಮ ಪ್ರೀತಿಯ ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಚೆಸ್ ಆಡುವುದು ಒಂದು ಕಲಿಕೆಯಾಗಿದೆ, ರೋಮಾಂಚನಕಾರಿ ಮತ್ತು ನನಗೆ ಲಾಭದಾಯಕ ಪ್ರಯಾಣವಾಗಿದೆ. ಅನೇಕ ಪಂದ್ಯಾವಳಿಗಳಲ್ಲಿ ನನ್ನ ಯಶಸ್ಸು ಇದನ್ನು ಸಾಬೀತುಪಡಿಸುತ್ತದೆ. ಆದರೆ ಇನ್ನೂ ಹೆಚ್ಚಿನದನ್ನು ಸಾಧಿಸಬೇಕಿದೆ. ನಾನು ಎಲ್ಲಾ ಮಹಿಳೆಯರಿಗೆ, ವಿಶೇಷವಾಗಿ ಯುವತಿಯರಿಗೆ ಒಂದು ಸಂದೇಶವನ್ನು ನೀಡಲು ಬಯಸುತ್ತೇನೆ. ಅಡೆತಡೆಗಳು ಏನೇ ಇರಲಿ, ನಿಮ್ಮ ಕನಸುಗಳನ್ನು ಅನುಸರಿಸಿ. ನಿಮ್ಮ ಉತ್ಸಾಹವು ನಿಮ್ಮ ಯಶಸ್ಸಿಗೆ ಶಕ್ತಿಯನ್ನು ನೀಡುತ್ತದೆ ಎಂದು ಅವರು ಪ್ರಧಾನಿ ಮೋದಿ ಅವರ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

ಪೋಷಕರು ಮತ್ತು ಒಡಹುಟ್ಟಿದವರು ಹೆಣ್ಣು ಮಕ್ಕಳನ್ನು ಬೆಂಬಲಿಸಬೇಕು. ಅವರ ಸಾಮರ್ಥ್ಯಗಳ ಮೇಲೆ ನಂಬಿಕೆಯಿಡಿ. ಅವರು ಅದ್ಭುತ ಸಾಧನೆಗಳನ್ನು ಮಾಡುತ್ತಾರೆ. ನನ್ನ ಜೀವನದಲ್ಲಿ ನನ್ನನ್ನು ಪೋಷಕರಾದ ರಮೇಶ್‌ಬಾಬು ಮತ್ತು ನಾಗಲಕ್ಷ್ಮಿ ಅವರು ಆಶೀರ್ವಾದಿಸಿದ್ದಾರೆ, ನನ್ನ ಸಹೋದರ, ಪ್ರಗ್ನಾನಂದ ಜೊತೆ ನಿಕಟ ಬಾಂಧವ್ಯವನ್ನು ಹೊಂದಿದ್ದೇನೆ. ನಾನು ಅತ್ಯುತ್ತಮ ತರಬೇತುದಾರರು ಮತ್ತು ಸಹ ಆಟಗಾರರನ್ನು ಹೊಂದಿದ್ದೇನೆ. ವಿಶ್ವನಾಥನ್ ಆನಂದ್ ಸರ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದರು.

ಭಾರತದಲ್ಲಿ ಮಹಿಳಾ ಅಥ್ಲೀಟ್‌ಗಳಿಗೆ ಬೆಂಬಲ ಹೆಚ್ಚುತ್ತಿದೆ, ಮಹಿಳಾ ಕ್ರೀಡಾಪಟುಗಳಿಗೆ ತರಬೇತಿ, ಮಾನ್ಯತೆ ಮತ್ತು ಅವಕಾಶಗಳನ್ನು ಒದಗಿಸುವಲ್ಲಿ ದೇಶವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ. ನನ್ನ FIDE ಶ್ರೇಯಾಂಕವನ್ನು ಇನ್ನಷ್ಟು ಸುಧಾರಿಸಲು ಮತ್ತು ಪ್ರೀತಿಸುವ ಕ್ರೀಡೆ ಕಡೆ ಹೆಚ್ಚಿನ ಗಮನ ವಹಿಸಲು ನಾನು ಉತ್ಸಕಳಾಗಿದ್ದೇನೆ ಎಂದು ಆರ್ ವೈಶಾಲಿ ಹೇಳಿದರು.

ಮಹಿಳಾ ದಿನಾಚರಣೆಯ ದಿನ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಖಾತೆಯಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡುವುದಾಗಿ ಈ ಮೊದಲು ಘೋಷಿಲಾಗಿತ್ತು. ಅದರಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News