ಸಿಐಎಸ್ಎಫ್ ಅಧಿಕಾರಿಗೆ ಖಾಸಗಿ ಏರ್ ಲೈನ್ಸ್ ಮಹಿಳಾ ಸಿಬ್ಬಂದಿ ಕಪಾಳಮೋಕ್ಷ

Update: 2024-07-12 05:01 GMT

 ಜೈಪುರ: ವಿಮಾನ ನಿಲ್ದಾಣದ ಭದ್ರತಾ ಕಾರ್ಯಕ್ಕೆ ನಿಯೋಜಿತರಾಗಿದ್ದ ಸಿಐಎಸ್ ಎಫ್ ಎಎಸ್ ಐಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಆರೋಪದಲ್ಲಿ ಜೈಪುರ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಂಜಾನೆ ಖಾಸಗಿ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ. ಭದ್ರತಾ ಸ್ಕ್ರೀನಿಂಗ್ ಗೆ ಒಳಪಡುವಂತೆ ಕೇಳಿಕೊಂಡಾಗ ಮಹಿಳೆ ಹೊಡೆದಿರುವುದಾಗಿ ಎಎಸ್ ಐ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮಹಿಳಾ ಸಿಬ್ಬಂದಿ ಕೂಡಾ ಎಎಸ್ ಐ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದು, ಏರ್ಲೈನ್ಸ್ ಸಂಸ್ಥೆ ತನ್ನ ಉದ್ಯೋಗಿಯ ಬೆಂಬಲಕ್ಕೆ ನಿಂತಿದೆ. ಮಹಿಳೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ವೇಳೆ ಈ ಸಂಘರ್ಷ ನಡೆದಿದ್ದು, ನಿರ್ದಿಷ್ಟ ಗೇಟ್ ಮೂಲಕ ಪ್ರವೇಶಿಸಲು ಈ ಮಹಿಳೆಗೆ ಅನುಮತಿ ಇರಲಿಲ್ಲ ಎನ್ನುವುದು ಎಎಸ್ ಐ ವಾದ.

ಭದ್ರತಾ ಸ್ಕ್ರೀನಿಂಗ್ ಗೆ ಒಳಪಡುವಂತೆ ಎಎಸ್ ಐ ಕೇಳಿಕೊಂಡರು. ಆದರೆ ಆ ವೇಳೆ ಮಹಿಳಾ ಸಿಐಎಸ್ ಎಫ್ ಸಿಬ್ಬಂದಿ ಆ ದ್ವಾರದಲ್ಲಿ ಕರ್ತವ್ಯದಲ್ಲಿ ಇರಲಿಲ್ಲ ಎನ್ನಲಾಗಿದೆ. ಭದ್ರತಾ ತಪಾಸಣೆಗೆ ಎಎಸ್ ಐ ಮಹಿಳಾ ಸಿಬ್ಬಂದಿಯನ್ನು ಕರೆಯುವ ವೇಳೆಗಾಗಲೇ ವಾಗ್ವಾದ ನಡೆಯುತ್ತಿತ್ತು ಎಂದು ವರದಿಯಾಗಿದೆ.

ತನ್ನ ಮಹಿಳಾ ಸಿಬ್ಬಂದಿಯ ಮೇಲೆ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಏರ್ ಲೈನ್ಸ್ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News