ದೇಶದ ವಿವಿಧೆಡೆ ಕಿರುಕುಳ ಎದುರಿಸುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವಂತೆ ನಾಗರಿಕ ಹಕ್ಕುಗಳ ಗುಂಪು ಆಗ್ರಹ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಆನಂತರ ದೇಶದ ವಿವಿಧೆಡೆ ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಘಟನೆಗಳು ವರದಿಯಾಗಿದ್ದು, ಅವರಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವಂತೆ ಮತ್ತು ಅವರ ಕ್ಷೇಮಪಾಲನೆ ಬಗ್ಗೆ ಕಾಳಜಿ ವಹಿಸಬೇಕೆಂದು ಪ್ರಜಾತಾಂತ್ರಿಕ ಹಕ್ಕುಗಳ ನಾಗರಿಕ ಗುಂಪು ಮಂಗಳವಾರ ಆಗ್ರಹಿಸಿದೆ.
‘‘ಇಸ್ಲಾಮೋಫೋಬಿಯಾ (ಇಸ್ಲಾಂ ಧರ್ಮದ ಬಗ್ಗೆ ಭೀತಿಯ ಮನೋಭಾವನೆ)ಕ್ಕೆ ಕಡಿವಾಣ ಹಾಕದಿರುವುದು,ಈಗ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಭದ್ರತಾಕಾರ್ಯಾಚರಣೆಯ ಸಂದರ್ಭದಲ್ಲಿ ಮಾನವಹಕ್ಕುಗಳ ಉಲ್ಲಂಘನೆ ಹಾಗೂ ದಾಳಿಯ ಆನಂತರ ಕಾಶ್ಮೀರಿ ವಿದ್ಯಾರ್ಥಿಗಳು ಕಿರುಕುಳ ಎದುರಿಸುತ್ತಿರುವ ಬಗ್ಗೆ ಮಾನವಹಕ್ಕುಗಳ ಗುಂಪುಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.
ಪಹಲ್ಗಾಂವ್ ಹತ್ಯಾಕಾಂಡದ ಜೊತೆ ನಂಟು ಹೊಂದಿದ್ದಾರೆಂದು ಶಂಕಿಸಲ್ಪಟ್ಟವರ ಮನೆಗಳನ್ನು ಧ್ವಂಸಗೊಳಿಸಲಾಗುತ್ತಿದೆ, ಉಗ್ರರ ಜೊತೆ ಸಹಾನುಭೂತಿ ಹೊಂದಿದ್ದಾರೆನ್ನಲಾದವರ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ ಹಾಗೂ ಹಲವಾರು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ನಾಗರಿಕ ಹಕ್ಕುಗಳ ಜನತಾ ಒಕ್ಕೂಟ ತಿಳಿಸಿದೆ.
ಉತ್ತರಾಖಂಡ, ಉತ್ತರಪ್ರದೇಶ ಹಾಗೂ ಪಂಜಾಬ್ ರಾಜ್ಯಗ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳು ದಾಳಿಗಳು ಮತ್ತು ನಿಂದನೆಗಳನ್ನು ಎದುರಿಸುತ್ತಿದ್ದಾರೆ. ದ್ವೇಷ ಹರಡುವವರಿಂದ ಆನ್‌ಲೈನ್‌ನಲ್ಲಿಯೂ ಅವರ ಮೇಲೆ ದಾಳಿಗಳು ನಡೆಯುತ್ತಿವೆ ಎಂದರು.