ಸೋನಿಯಾ ಹೇಳಿಕೆಯನ್ನು ತಿರುಚಲಾಗಿದೆ: ಕಾಂಗ್ರೆಸ್

ಸೋನಿಯಾಗಾಂಧಿ | PTI
ಹೊಸದಿಲ್ಲಿ: ರಾಷ್ಟ್ರಪತಿ ಭಾಷಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸೋನಿಯಾಗಾಂಧಿಯವರನ್ನು ಕಾಂಗ್ರೆಸ್ ಪಕ್ಷವು ಸಮರ್ಥಿಸಿಕೊಂಡಿದೆ. ಕಾಂಗ್ರೆಸ್ ನಾಯಕಿ ನೀಡಿದ ಹೇಳಿಕೆಯನ್ನು ಮಾಧ್ಯಮಗಳ ಒಂದು ವರ್ಗವು ತಿರುಚಿದೆ ಎಂದು ಅದು ಆಪಾದಿಸಿದೆ.
ರಾಷ್ಟ್ರಪತಿಯವರನ್ನು ಸಂಸತ್‌ಭವನದ ಉದ್ಘಾಟನೆಗೆ ಆಹ್ವಾನಿಸದೆ ಇರುವುದರಿಂದ ಹಿಡಿದು ಅವರನ್ನು ಮೋದಿ ಸರಕಾರವು ಅವಮಾನಿಸುತ್ತಲೇ ಬಂದಿದೆ. ದೇಶದ ಆರ್ಥಿಕತೆಯ ದುಸ್ಥಿತಿಯನ್ನು ಬಚ್ಚಿಡಲು ಬಿಜೆಪಿ ನಾಯಕರು ಹಾಗೂ ಒಂದು ವರ್ಗದ ಮಾಧ್ಯಮ ಸೋನಿಯಾ ಅವರ ಹೇಳಿಕೆಯನ್ನು ತಿರುಚಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಷ್ಟ್ರಪತಿಯವರನ್ನಾಗಲಿ ಅಥವಾ ಭಾರತದ ಇತರ ಯಾವುದೇ ಪ್ರಜೆಯನ್ನಾಗಲಿ ಅಪಮಾನಿಸದು. ನಮ್ಮ ಸಂಸ್ಕೃತಿಯಲ್ಲ. ಆದರೆ ಬಿಜೆಪಿಯು ಹಾಲಿ ರಾಷ್ಟ್ರಪತಿ ಹಾಗೂ ಹಿಂದಿನ ರಾಷ್ಟ್ರಪತಿಯವರನ್ನು ಪ್ರಜಾಪ್ರಭುತ್ವದ ದೇಗುಲ ಹಾಗೂ ರಾಮಮಂದಿರದಿಂದ ದೂರವಿಡುತ್ತಲೇ ಬಂದಿದೆಯೆಂದು ಖರ್ಗೆ ಟೀಕಿಸಿದ್ದಾರೆ.