ಕಾಂಗ್ರೆಸ್ ನ ಮತಿ ಹೀನ ಉಚಿತ ಕೊಡುಗೆಗಳು ರಾಜ್ಯವನ್ನು ದಿವಾಳಿಯತ್ತ ತಳ್ಳುತ್ತಿದೆ: ತೇಜಸ್ವಿ ಸೂರ್ಯ

Update: 2024-04-17 15:32 GMT

ತೇಜಸ್ವಿ ಸೂರ್ಯ | PC :PTI 

ಹೊಸದಿಲ್ಲಿ : ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್ ನ ನೀತಿಗಳು ರಾಜ್ಯವನ್ನು ದೀವಾಳಿಯತ್ತ ದೂಡುತ್ತಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಸರಕಾರ ಅಭಿವೃದ್ಧಿ ಹಾಗೂ ಮೂಲಭೂತ ಯೋಜನೆಗಳ ಹಣವನ್ನು ಮತಿ ಹೀನ ಉಚಿತ ಕೊಡುಗೆಗೆ ಬಳಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತೇಜಸ್ವಿ ಸೂರ್ಯ ಅವರು ಮಾತನಾಡಿದರು.

‘‘ಕಳೆದ ಕೆಲವು ತಿಂಗಳಿಂದ ಸುದ್ದಿಯಾಗುತ್ತಿರುವ ಕರ್ನಾಟಕವನ್ನು ಗಮನಿಸಿ. ನಮ್ಮಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳುತ್ತಾರೆ. ಅವರು ಪ್ರಾಮಾಣಿಕವಾಗಿ ಈ ಹೇಳಿಕೆ ನೀಡಿದ್ದಾರೆ. ಯಾಕೆಂದರೆ, ಎಲ್ಲಾ ಹಣವನ್ನು ಕಾಂಗ್ರೆಸ್ ಈಗ ಗ್ಯಾರಂಟಿಗಳು ಹಾಗೂ ಉಚಿತ ಕೊಡುಗೆಗಳನ್ನು ಈಡೇರಿಸಲು ಬಳಸುತ್ತಿದೆ. ರಾಜ್ಯವನ್ನು ದೀವಾಳಿಯತ್ತ ದೂಡುತ್ತಿದೆ’’ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಇದೇ ರೀತಿಯ ನೀತಿಗಳನ್ನು ಘೋಷಿಸಿರುವುದಕ್ಕೆ ಅವರು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಈ ಉಚಿತ ಕೊಡುಗೆಗಳು ಕರ್ನಾಟಕದಲ್ಲಿ ಅನಾಹುತಕಾರಿ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಕೂಡ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಐದು ಗ್ಯಾರಂಟಿಗಳು ಈಗ ರಾಷ್ಟ್ರೀಯ ಯೋಜನೆಗಳಾಗಿವೆ. ಈ ರೀತಿಯ ಆರ್ಥಿಕ ನೀತಿಗಳಿಂದ ಉಂಟಾಗಿರುವ ದುರ್ಬಲ ಹಾಗೂ ಅನಾಹುತಕಾರಿ ಪರಿಣಾಮವನ್ನು ನಾವು ಕರ್ನಾಟಕದಲ್ಲಿ ಕಳೆದ ಏಳೆಂಟು ತಿಂಗಳುಗಳಿಂದ ನೋಡಿದ್ದೇವೆ ಎಂದು ಅವರು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News