ಭಾರತೀಯ ಧ್ವಜಕ್ಕೆ ಸಂಬಂಧಿಸಿದ ವಿವಾದಾತ್ಮಕ ಪೋಸ್ಟ್: ಅಮಾನತುಗೊಂಡಿರುವ ಮಾಲ್ಡೀವ್ಸ್ ಸಚಿವೆಯಿಂದ ಕ್ಷಮೆಯಾಚನೆ

Update: 2024-04-08 09:50 GMT

ಮರಿಯಮ್ ಶಿಯುನ | PC : X 

ಮಾಲೆ: ಅಶೋಕ ಚಕ್ರವನ್ನು ಹೋಲುವ ಚಿಹ್ನೆಯೊಂದಿಗೆ ವಿರೋಧ ಪಕ್ಷಗಳ ವಿರುದ್ಧ ಮಾಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್ ವಿವಾದದ ಕುರಿತು ಸೋಮವಾರ ಮಾಜಿ ಮಾಲ್ಡೀವ್ಸ್ ಸಚಿವೆ ಮರಿಯಮ್ ಶಿಯುನ ಕ್ಷಮೆ ಕೋರಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಸಮದಲ್ಲಿ ಪೋಸ್ಟ್ ಮಾಡಿರುವ ಶಿಯುನ, “ಇತ್ತೀಚಿಗಿನ ನನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಗೆ ದೊರಕಿರುವ ಟೀಕೆಗಳಿಗೆ ನಾನು ಉತ್ತರಿಸಲು ಬಯಸುತ್ತೇನೆ. ನನ್ನ ಇತ್ತೀಚಿನ ಪೋಸ್ಟ್ ನಿಂದ ಆಗಿರುವ ಯಾವುದೇ ಗೊಂದಲಗಳಿಗೆ ನಾನು ಅತ್ಯಂತ ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ” ಎಂದು ಬರೆದುಕೊಂಡಿದ್ದಾರೆ.

“ಮಾಲ್ಡೀವ್ಸ್ ವಿರೋಧ ಪಕ್ಷ ಎಂಡಿಪಿಗೆ ಪ್ರತಿಕ್ರಿಯಿಸುವಾಗ ನಾನು ಬಳಸಿದ್ದ ಚಿತ್ರವು ಭಾರತೀಯ ಧ್ವಪಜವನ್ನು ಹೋಲುತ್ತಿದೆ ಎಂಬ ಅಂಶವನ್ನು ನನ್ನ ಗಮನಕ್ಕೆ ತರಲಾಗಿದೆ. ಇದು ಸಂಪೂರ್ಣ ನಿರುದ್ದಿಶ್ಯದ್ದಾಗಿತ್ತು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಉಂಟು ಮಾಡಿರುವ ತಪ್ಪು ತಿಳಿವಳಿಕೆಗೆ ನಾನು ಪ್ರಾಮಾಣಿಕವಾಗಿ ವಿಷಾದಿಸುತ್ತೇನೆ” ಎಂದೂ ಹೇಳಿದ್ದಾರೆ.

“ನಾವು ಭಾರತದೊಂದಿಗೆ ಹಂಚಿಕೊಂಡಿರುವ ಸಂಬಂಧ ಹಾಗೂ ಪರಸ್ಪರ ಗೌರವಗಳಿಗೆ ಮಾಲ್ಡೀವ್ಸ್ ಆಳವಾಗಿ ಬೆಲೆ ನೀಡುತ್ತದೆ. ಇಂತಹ ನಿರ್ಲಕ್ಷ್ಯಗಳನ್ನು ತಪ್ಪಿಸಲು ಭವಿಷ್ಯದಲ್ಲಿ ನಾನು ಯಾವುದೇ ಚಿತ್ರಗಳನ್ನು ಹಂಚಿಕೊಳ್ಳುವ ಮುನ್ನ ತೀವ್ರ ಎಚ್ಚರದಿಂದಿರುತ್ತೇನೆ” ಎಂದು ಭರವಸೆ ನೀಡಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಪಕ್ಷದ ಸದಸ್ಯೆಯಾಗಿರುವ ಶಿಯುನ, ಎಂಡಿಪಿ ಭಿತ್ತಿ ಚಿತ್ರದಲ್ಲಿರುವ ದಿಕ್ಸೂಚಿಯ ಬದಲಿಗೆ ಅಶೋಕ ಚಕ್ರದಂಥ ಚಿಹ್ನೆಯನ್ನು ಬಳಸಿದ್ದರು. ಇದರೊಂದಿಗೆ ಮುಂಬರುವ ಮಾಲ್ಡೀವ್ಸ್ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಅವರು ಮನವಿ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News