ಮುಂಬೈ ನ್ಯಾಯಾಲಯದಿಂದ ರಾಣಾ ದಾಖಲೆಗಳನ್ನು ಸಂಗ್ರಹಿಸಿದ ದಿಲ್ಲಿ ಕೋರ್ಟ್

Update: 2025-04-10 21:34 IST
Tahawwur Hussain Rana

 ತಹಾವುರ್ ಹುಸೈನ್ ರಾಣಾ | PC : X 

  • whatsapp icon

ಹೊಸದಿಲ್ಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಎನ್ನಲಾದ ತಹಾವುರ್ ಹುಸೈನ್ ರಾಣಾನ ವಿಚಾರಣೆಗೆ ಸಂಬಂಧಿಸಿದ ದಾಖಲೆಗಳನ್ನು ದಿಲ್ಲಿಯ ನ್ಯಾಯಾಲಯವು ಪಡೆದುಕೊಂಡಿದೆಯೆಂದು ನ್ಯಾಯಾಲಯದ ಮೂಲವೊಂದು ತಿಳಿಸಿದೆ.

ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ದಿಲ್ಲಿಯ ಜಿಲ್ಲಾ ನ್ಯಾಯಾಧೀಶ ವಿಮಲ್‌ಕುಮಾರ್ ಯಾದವ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.

26/11 ದಾಳಿ ಪ್ರಕರಣಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳ ವಿಚಾರಣೆಗೆ ಈ ದಾಖಲೆಗಳ ಅಗತ್ಯವಿದ್ದುದರಿಂದ ಅವುಗಳನ್ನು ಮುಂಬೈಗೆ ಕಳುಹಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News