ಅರವಿಂದ್ ಕೇಜ್ರಿವಾಲ್ ಗೆ ಸಮನ್ಸ್ ಜಾರಿಗೊಳಿಸಿದ ದಿಲ್ಲಿ ನ್ಯಾಯಾಲಯ

Update: 2024-03-07 05:46 GMT

ಅರವಿಂದ್ ಕೇಜ್ರಿವಾಲ್ |Photo: NDTV 

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜಾರಿ ನಿರ್ದೇಶನಾಲಯವು ಪದೇ ಪದೇ ಸಮನ್ಸ್ ಜಾರಿಗೊಳಿಸುವುದು, ಅರವಿಂದ್ ಕೇಜ್ರಿವಾಲ್ ಜಾರಿ ನಿರ್ದೇಶನಾಲಯದ ಎದುರು ಹಾಜರಾಗಲು ನಿರಾಕರಿಸುವುದು ನಡೆಯುತ್ತಿರುವ ಬೆನ್ನಿಗೇ ಹೊಸ ಬೆಳವಣಿಗೆಯೊಂದು ನಡೆದಿದ್ದು, ದಿಲ್ಲಿ ನ್ಯಾಯಾಲಯವೊಂದು ಮಾರ್ಚ್ 16ರಂದು ತನ್ನೆದುರು ಹಾಜರಾಗುವಂತೆ ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ಜಾರಿಗೊಳಿಸಿದೆ.

ದಿಲ್ಲಿ ಅಬಕಾರಿ ನೀತಿ ಹಗರಣ ಪ್ರಕರಣದ ಸಂಬಂಧ ಅರವಿಂದ್ ಕೇಜ್ರಿವಾಲ್‌ರನ್ನು ವಿಚಾರಣೆಗೊಳಪಡಿಸಲು ಬಯಸಿದ್ದ ಜಾರಿ ನಿರ್ದೇಶನಾಲಯವು, ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಪ್ರಕರಣದಡಿ ತಾನು ಜಾರಿಗೊಳಿಸಿರುವ ಸಮನ್ಸ್‌ಗಳಿಗೆ ಅರವಿಂದ್ ಕೇಜ್ರಿವಾಲ್ ಗೈರು ಹಾಜರಾಗಿದ್ದಾರೆ ಎಂದು ನ್ಯಾಯಾಲಯದ ಮೆಟ್ಟಿಲೇರಿದೆ. ಈ ದೂರನ್ನು ಆಧರಿಸಿ ದಿಲ್ಲಿ ನ್ಯಾಯಾಲಯವೊಂದು ಅರವಿಂದ್ ಕೇಜ್ರಿವಾಲ್‌ಗೆ ಹೊಸ ಸಮನ್ಸ್ ಜಾರಿಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News