ದಿಲ್ಲಿ ಅಬಕಾರಿ ನೀತಿ ಪ್ರಕರಣ | ಬಿಆರ್ ಎಸ್ ನಾಯಕಿ ಕವಿತಾ ಕಸ್ಟಡಿ ಮಾ. 26ರ ವರೆಗೆ ವಿಸ್ತರಣೆ

Update: 2024-03-23 15:27 GMT

ಕೆ. ಕವಿತಾ |  Photo: X

ಹೊಸದಿಲ್ಲಿ : ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಆರ್ ಎಸ್ ನಾಯಕಿ ಕೆ. ಕವಿತಾ ಅವರ ಜಾರಿ ನಿರ್ದೇಶನಾಲಯದ ಕಸ್ಟಡಿಯನ್ನು ಇಲ್ಲಿನ ನ್ಯಾಯಾಲಯ ಮಾರ್ಚ್ 26ರ ವರೆಗೆ ವಿಸ್ತರಿಸಿದೆ.

ಕವಿತಾ ಅವರ ಕಸ್ಟಡಿಯನ್ನು 5 ದಿನಗಳ ಕಾಲ ವಿಸ್ತರಿಸಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿತ್ತು.

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ ಅವರು ದಿಲ್ಲಿಯಲ್ಲಿ ಅಬಕಾರಿ ಪರವಾನಿಗೆಯಲ್ಲಿ ಸಿಂಹ ಪಾಲಿಗೆ ಪ್ರತಿಯಾಗಿ ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರೂ. ಲಂಚ ಪಾವತಿಸಿದ ಆರೋಪಕ್ಕೆ ಒಳಗಾಗಿರುವ ‘ಸೌತ್ ಗ್ರೂಪ್’ನ ಪ್ರಮುಖ ಸದಸ್ಯೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ತೆಲಂಗಾಣದ ಎಂಎಲ್ಸಿ ಆಗಿರುವ ಕವಿತಾ (46) ಅವರನ್ನು ಜಾರಿ ನಿರ್ದೇಶನಾಲಯ ಹೈದರಾಬಾದ್ ನ ಬಂಜಾರಾ ಹಿಲ್ಸ್ನಲ್ಲಿರುವ ಅವರ ನಿವಾಸದಿಂದ ಮಾರ್ಚ್ 15ರಂದು ಬಂಧಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News