"ಪ್ರಧಾನಿಗೆ ಭಯೋತ್ಪಾದಕರನ್ನು ನಿಗ್ರಹಿಸುವ ಸಾಮರ್ಥ್ಯವಿಲ್ಲವೇ?": ಪಿಎಂ ಮನಮೋಹನ್ ಸಿಂಗ್ ಗೆ ಸಿಎಂ ಮೋದಿ ಕೇಳಿದ್ದ ಪ್ರಶ್ನೆಗಳು ವೈರಲ್

Update: 2025-04-24 17:24 IST
"ಪ್ರಧಾನಿಗೆ ಭಯೋತ್ಪಾದಕರನ್ನು ನಿಗ್ರಹಿಸುವ ಸಾಮರ್ಥ್ಯವಿಲ್ಲವೇ?": ಪಿಎಂ ಮನಮೋಹನ್ ಸಿಂಗ್ ಗೆ ಸಿಎಂ ಮೋದಿ ಕೇಳಿದ್ದ ಪ್ರಶ್ನೆಗಳು ವೈರಲ್
  • whatsapp icon

ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ, 2012 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ʼಭಯೋತ್ಪಾದಕರು ಭಾರತಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಗಡಿ ಭದ್ರತಾ ಲೋಪಗಳ ಬಗ್ಗೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತೀವ್ರವಾಗಿ ಪ್ರಶ್ನಿಸುತ್ತಿರುವʼ ಹಳೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

"ಈ ಭಯೋತ್ಪಾದಕರು ಮತ್ತು ನಕ್ಸಲರು ತಮ್ಮ ಮದ್ದುಗುಂಡುಗಳನ್ನು ಎಲ್ಲಿಂದ ಪಡೆಯುತ್ತಾರೆ? ಅದು ವಿದೇಶಿ ನೆಲದಿಂದ ಬರುತ್ತದೆ, ನೀವು ನಮ್ಮ ಗಡಿಗಳನ್ನು ನಿಯಂತ್ರಿಸುತ್ತೀರಿ, ಗಡಿ ಭದ್ರತಾ ಪಡೆ ನಿಮ್ಮ ಕೈಯಲ್ಲಿದೆ, ಹಾಗಾಗಿ, ಅವುಗಳನ್ನು ಸರಿಯಾಗಿ ಸುರಕ್ಷಿತಗೊಳಿಸಿ" ಎಂದು ಮುಂಬೈನಲ್ಲಿ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ‌ಅವರು ಅಂದಿನ ಮನಮೋಹನ್‌ ಸಿಂಗ್‌ ಸರ್ಕಾರಕ್ಕೆ ಆಗ್ರಹಿಸಿದ್ದರು. “ಸರ್ಕಾರವು ಏನನ್ನು ನಿಯಂತ್ರಿಸಬಹುದು ಎಂಬುದರ ಮೇಲೆ ಗಮನಹರಿಸಬೇಕು, ನಿರ್ದಿಷ್ಟವಾಗಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ನೀಡುವ ವಿದೇಶದಿಂದ ಹವಾಲಾ ಹಣದ ಹರಿವನ್ನು ನಿಲ್ಲಿಸಬೇಕು. ವಿದೇಶಗಳಿಂದ ಭಾರತಕ್ಕೆ ಹವಾಲಾ ಮಾರ್ಗಗಳ ಮೂಲಕ ಭಯೋತ್ಪಾದಕರನ್ನು ತಲುಪುವ ನಿಧಿಯ ಹರಿವನ್ನು ಪ್ರಧಾನಿಗೆ ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲವೇ? ಪ್ರಧಾನ ಮಂತ್ರಿ ಅವರೇ ದಯವಿಟ್ಟು ಉತ್ತರಿಸಿರಿ: ಗಡಿಗಳ ನಿಯಂತ್ರಣ ನಿಮ್ಮ ಕೈಯಲ್ಲಿದೆ, BSF ಮತ್ತು ಸೈನ್ಯ ನಿಮ್ಮ ನಿಯಂತ್ರಣದಲ್ಲಿವೆ. ನೌಕಾಪಡೆ ನಿಮ್ಮ ಕೈಯಲ್ಲಿದೆ. ಆದರೂ, ಈ ವಿದೇಶಿ ನುಸುಳುಕೋರರು ಹೇಗೆ ದೇಶದ ಒಳಗೆ ನುಗ್ಗುತ್ತಿದ್ದಾರೆ? ಉಗ್ರವಾದಿಗಳು ವಿದೇಶದಿಂದ ನಮ್ಮ ದೇಶದೊಳಗೆ ನುಗ್ಗುತ್ತಿದ್ದಾರೆ. ದಯವಿಟ್ಟು ಇದಕ್ಕೆ ಉತ್ತರಿಸಿ ..ಭಾರತ ಸರ್ಕಾರವು ದೂರವಾಣಿ ಮತ್ತು ಇಮೇಲ್ ಸೇರಿದಂತೆ ಎಲ್ಲಾ ಸಂವಹನಗಳನ್ನು ನಿಯಂತ್ರಿಸುತ್ತದೆ. ಭಯೋತ್ಪಾದಕ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದಾಳಿಗಳನ್ನು ತಡೆಯಲು ಅವರು ಈ ಚಾನೆಲ್‌ಗಳನ್ನು ಬಳಸುತ್ತಿಲ್ಲ ಯಾಕೆ " ಎಂದು ಆಗಿನ ಪ್ರಧಾನಿಯಲ್ಲಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದರು.

Full View

ಇದೀಗ, ಅದೇ ವಿಡಿಯೋ ವೈರಲ್‌ ಆಗುತ್ತಿದ್ದು, ಅಂದು ಸಿಎಂ ನರೇಂದ್ರ ಮೋದಿ ಅವರು ಪ್ರಧಾನಿಗೆ ಕೇಳಿದ ಪ್ರಶ್ನೆಗೆ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರೇ ಉತ್ತರಿಸಬೇಕು ಎಂದು ಜನರು ಪ್ರಶ್ನಿಸತೊಡಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ದ್ವಿಮುಖ ನೀತಿ ತೋರಿಸುತ್ತಿದ್ದಾರೆ, ಪಹಲ್ಗಾಮ್ ದಾಳಿಯ ನಂತರ ಪ್ರಸ್ತುತ ಪ್ರಧಾನಿ ಪತ್ರಿಕಾಗೋಷ್ಠಿ ನಡೆಸಿಲ್ಲ, ಭದ್ರತಾ ಲೋಪಕ್ಕೆ ಜವಾಬ್ದಾರಿಯನ್ನು ವಹಿಸಿಲ್ಲ ಎಂದು ಹಲವರು ಖಂಡಿಸಿದ್ದಾರೆ. ಕೆಲವರು ಪಿಎಂ ಮೋದಿಗೆ ಈ ಎಲ್ಲ ಪ್ರಶ್ನೆಗಳನ್ನು ಸಿಎಂ ಮೋದಿ ಮಾತ್ರ ಕೇಳಬಲ್ಲರು ಎಂದು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News