ನಾಯಿಗಳಿಗೆ, ಮುಸ್ಲಿಮರಿಗೆ ಪ್ರವೇಶವಿಲ್ಲ: ಪಶ್ಚಿಮ ಬಂಗಾಳದ ಬಿಧಾನಚಂದ್ರ ಕೃಷಿ ವಿವಿಯಲ್ಲಿ ಕಾಣಿಸಿಕೊಂಡ ಪೋಸ್ಟರ್!

PC : X \ @MaktoobMedia
ಕೋಲ್ಕತಾ: ಭಾರತದ ಪ್ರತಿಷ್ಠಿತ ಕೃಷಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಪಶ್ಚಿಮ ಬಂಗಾಳದ ನಾಡಿಯಾದಲ್ಲಿಯ ಬಿಧಾನ ಚಂದ್ರ ಕೃಷಿ ವಿವಿ(ಬಿಸಿಕೆವಿ)ಯ ಕೃಷಿ ವಿಭಾಗದ ಪ್ರವೇಶ ದ್ವಾರದಲ್ಲಿರುವ ನೋಟಿಸ್ ಬೋರ್ಡ್‌ನಲ್ಲಿ ಇಸ್ಲಾಮೋಫೋಬಿಕ್ ಮತ್ತು ಅವಹೇಳನಕಾರಿ ಹೇಳಿಕೆಗಳಿರುವ ಪೋಸ್ಟರ್ ಕಾಣಿಸಿಕೊಂಡಿದೆ.
‘ನಾಯಿಗಳು ಮತ್ತು ಮುಸ್ಲಿಮರಿಗೆ ಪ್ರವೇಶವಿಲ್ಲ. ಎಲ್ಲರ ಕಣ್ಣುಗಳು ಪಹಲ್ಗಾಮ್ ಮೇಲಿವೆ. ಭಯೋತ್ಪಾದನೆ ಎಂದರೆ ಇಸ್ಲಾಮ್ ಎಂದು ಅರ್ಥ ’ ಎಂದು ಈ ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಪೋಸ್ಟ್‌ರ್ ಮೇಲೆ ಹೆಸರಿಲ್ಲ, ಹೀಗಾಗಿ ಅದನ್ನು ಯಾರು ಅಂಟಿಸಿದ್ದಾರೆ ಎನ್ನುವುದನ್ನು ಗುರುತಿಸಲು ವಿವಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಸಾಧ್ಯವಾಗಿಲ್ಲ.
26 ಪ್ರವಾಸಿಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿರುವ ಇಸ್ಲಾಮೋಫೋಬಿಕ್ ಅಭಿಯಾನದ ಭಾಗವಾಗಿ ಈ ಪೋಸ್ಟರ್ ಕಾಣಿಸಿಕೊಂಡಿದೆ.
ಶೈಕ್ಷಣಿಕ ಶ್ರೇಷ್ಠತೆಗಾಗಿ ಹೆಸರುವಾಸಿಯಾಗಿರುವ ಕ್ಯಾಂಪಸ್‌ನಲ್ಲಿಯ ನೋಟಿಸ್ ಬೋರ್ಡ್‌ನಲ್ಲಿ ಇಂತಹ ಪೋಸ್ಟರ್ ಕಾಣಿಸಿಕೊಂಡಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ ಮತ್ತು ಸ್ವೀಕಾರಾರ್ಹವಲ್ಲ ಎಂದು ವಿವಿಯ ಹಳೆಯ ವಿದ್ಯಾರ್ಥಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.