ವಿದೇಶಾಂಗ ವ್ಯವಹಾರಗಳಲ್ಲಿ ಮೂಗು ತೂರಿಸಬೇಡಿ: ರಾಜ್ಯಗಳಿಗೆ ಕೇಂದ್ರದ ತಾಕೀತು

Update: 2024-07-26 11:45 GMT

 ಕೆ.ವಾಸುಕಿ | PC : X 

ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳು ಕೇಂದ್ರದ ವಿಶೇಷಾಧಿಕಾರವಾಗಿದೆ ಮತ್ತು ರಾಜ್ಯ ಸರಕಾರಗಳು ತಮ್ಮ ಸಂವಿಧಾನ ವ್ಯಾಪ್ತಿಯನ್ನು ಮೀರಿ ಅದರಲ್ಲಿ ಮೂಗು ತೂರಿಸಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಖಡಕ್ಕಾಗಿ ತಿಳಿಸಿದೆ.

ಕೇರಳ ಸರಕಾರವು ಜು.15ರಂದು ಐಎಎಸ್ ಅಧಿಕಾರಿ ಕೆ.ವಾಸುಕಿ ಅವರನ್ನು ವಿದೇಶಾಂಗ ಸಹಕಾರ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿರುವ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರವಾಗಿ ಸಚಿವಾಲಯದ ಈ ಹೇಳಿಕೆ ಹೊರಬಿದ್ದಿದೆ.

ಸಂವಿಧಾನದ ಏಳನೇ ಪರಿಚ್ಛೇದದಡಿ ಅನುಸೂಚಿ 1ರಲ್ಲಿ ಕೇಂದ್ರ ಪಟ್ಟಿಯಲ್ಲಿನ ಐಟಂ ಸಂಖ್ಯೆ 10ರಲ್ಲಿ ವಿದೇಶಾಂಗ ವ್ಯವಹಾರಗಳು ಮತ್ತು ಯಾವುದೇ ದೇಶದ ಜೊತೆ ಭಾರತ ಒಕ್ಕೂಟದ ಸಂಬಂಧ ಕುರಿತ ಎಲ್ಲ ವಿಷಯಗಳು ಕೇಂದ್ರ ಸರಕಾರದ ವಿಶೇಷಾಧಿಕಾರವಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ವಿದೇಶಾಂಗ ವ್ಯವಹಾರಗಳು ಸಮವರ್ತಿ ಪಟ್ಟಿಯಲ್ಲಿಲ್ಲ, ಅದು ರಾಜ್ಯ ಪಟ್ಟಿಯಲ್ಲಿಯೂ ಇಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News