ಮೌಲಾನಾ ಆಝಾದ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಡಾ. ಶಬಾನಾ ಖೈಸರ್ ಸೂರಿ ನೇಮಕ

Update: 2025-01-21 14:52 IST
Photo of  Dr. Shabana Qaiser Suri

ಡಾ. ಶಬಾನಾ ಖೈಸರ್ ಸೂರಿ 

  • whatsapp icon

ಹೈದರಾಬಾದ್: ಮೌಲಾನಾ ಆಜಾದ್ ರಾಷ್ಟ್ರೀಯ ವಿಶ್ವವಿದ್ಯಾಲಯ (MANUU)ದಲ್ಲಿ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಡಾ. ಶಬಾನಾ ಖೈಸರ್ ಸೂರಿ ನೇಮಕಗೊಂಡಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಕೆರೂರದ ಡಾ. ಶಬಾನಾ ಅವರು 2003ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ನಂತರ ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕವನ್ನು ಗೆದ್ದುಕೊಂಡರು. ಮುಂದುವರಿದು ಅದೇ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನೂ ಪಡೆದರು.

MANUU ನಲ್ಲಿ ಮೊದಲ ಮಹಿಳಾ MANUUTA (ಶಿಕ್ಷಕರ ಸಂಘ) ಅಧ್ಯಕ್ಷೆಯಾದ ಡಾ. ಶಬಾನಾ ಸೂರಿ ಅವರು FEDCUTA (ಫೆಡರೇಶನ್ ಆಫ್ ಸೆಂಟ್ರಲ್ ಯುನಿವರ್ಸಿಟೀಸ್ ಟೀಚರ್ಸ್ ಅಸೋಸಿಯೇಷನ್) ದ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿಯೂ ಆಯ್ಕೆಯಾದರು.

ಇದೀಗ MANUU ನ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದ ಡಾ. ಶಬಾನಾ ಅವರಿಗೆ ಕುಟುಂಬ ಸದಸ್ಯರು, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News