ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಗೆ ಮುನ್ನ ಏಕನಾಥ್ ಶಿಂಧೆ ತಡರಾತ್ರಿ ಸಭೆ
ಹೊಸದಿಲ್ಲಿ/ಮುಂಬೈ: ಅಜಿತ್ ಪವಾರ್ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ದಿಂದ ಸಿಡಿದೆದ್ದು ಮಹಾರಾಷ್ಟ್ರದ ಸಮ್ಮಿಶ್ರ ಸರಕಾರಕ್ಕೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿನ್ನೆ ತಡರಾತ್ರಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಅಧಿಕಾರ ಹಂಚಿಕೆ ಕುರಿತು ಚರ್ಚಿಸಿದರು.
ಮಧ್ಯರಾತ್ರಿ 2 ಗಂಟೆಯವರೆಗೆ ನಡೆದ ಸಭೆಯಲ್ಲಿ ಏಕನಾಥ್ ಶಿಂಧೆ ಹಾಗೂ ದೇವೇಂದ್ರ ಫಡ್ನವಿಸ್ ಅವರು ರವಿವಾರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರನೇ ಮಿತ್ರ ಅಜಿತ್ ಪವಾರ್ ಅವರ ಪ್ರವೇಶದ ನಂತರ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದರು.
ಅಜಿತ್ ಪವಾರ್ ಅವರು ಆಡಳಿತಾರೂಢ ಸಮ್ಮಿಶ್ರಕ್ಕೆ ಎಂಟ್ರಿ ಕೊಡುವುದರಿಂದ ತಮ್ಮ ಶಾಸಕರಿಗೆ ಅನಾನುಕೂಲವಾಗಿದೆ ಎಂಬ ವರದಿಗಳನ್ನು ಶಿಂಧೆ ಬಣ ನಿರಾಕರಿಸಿದ ಗಂಟೆಗಳ ನಂತರ ಈ ಚರ್ಚೆಗಳು ನಡೆದವು.
ಏಕನಾಥ್ ಶಿಂಧೆ ಅವರಿಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಯಾವುದೇ ಯೋಚನೆ ಇಲ್ಲ ಎಂದು ಶಿಂಧೆ ಬಣ ಪ್ರತಿಪಾದಿಸಿದೆ.