ಚುನಾವಣಾ ಕಾನೂನುಗಳಿಗೆ ತಿದ್ದುಪಡಿ: 3 ವಾರಗಳೊಳಗೆ ಉತ್ತರಿಸಲು ಕೇಂದ್ರಕ್ಕೆ ಸುಪ್ರೀಂ ಆದೇಶ

Update: 2025-04-17 22:15 IST
ಚುನಾವಣಾ ಕಾನೂನುಗಳಿಗೆ ತಿದ್ದುಪಡಿ: 3 ವಾರಗಳೊಳಗೆ ಉತ್ತರಿಸಲು ಕೇಂದ್ರಕ್ಕೆ ಸುಪ್ರೀಂ ಆದೇಶ

Photo credit: PTI

  • whatsapp icon

ಹೊಸದಿಲ್ಲಿ: 1961ರ ಚುನಾವಣಾ ಕಾನೂನುಗಳಿಗೆ ಇತ್ತೀಚೆಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತಿತರರು ಸಲ್ಲಿಸಿದ ಅರ್ಜಿಗಳಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಚುನಾವಣಾ ಆಯೋಗಕ್ಕೆ ಇನ್ನೂ ಮೂರು ವಾರಗಳ ಕಾಲಾವಕಾಶ ನೀಡಿದೆ.

ರಮೇಶ್ ಅವರ ಅರ್ಜಿಗೆ ಸಂಬಂಧಿಸಿ ಜನವರಿ 15ರೊಳಗೆ ಉತ್ತರಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

ಚುನಾವಣಾ ಆಯೋಗದ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಮಣೀಂದರ್ ಸಿಂಗ್ ಅವರು ನ್ಯಾಯಾಲಯದ ನೋಟಿಸ್ ಗೆ ಉತ್ತರಿಸಲು ಮೂರು ವಾರಗಳ ಕಾಲವಕಾಶ ನೀಡುವಂತೆ ಕೋರಿದ್ದರು.

ಅವರ ಮನವಿಗೆ ಸಮ್ಮತಿಸಿದ ನ್ಯಾಯಪೀಠವು ಮುಂದಿನ ಆಲಿಕೆಯನ್ನು ಜುಲೈ 21ಕ್ಕೆ ನಿಗದಿಪಡಿಸಿತು.

1961ರ ಚುನಾವಣಾ ನಿರ್ವಹಣಾ ಕಾನೂನುಗಳಿಗೆ ಕೇಂದ್ರ ಸರಕಾರವು ಅತ್ಯಂತ ಜಾಣ್ಮೆಯಿಂದ ತಿದ್ದುಪಡಿಗಳನ್ನು ಮಾಡಿದೆ. ಮತದಾರರ ಗುರುತು ಬಹಿರಂಗಗೊಳ್ಳುವುದೆಂಬ ನೆಪನೀಡಿ ಸಾರ್ವಜನಿಕರಿಗೆ ಮತದಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯುವುದನ್ನು ನಿಷೇಧಿಸಿದೆ ಅರ್ಜಿದಾರರು ಆರೋಪಿಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಮತದಾರರ ಮತದಾನದ ಆಯ್ಕೆಯು ಮತದಾನದ ವಿವರಗಳನ್ನು ಬಹಿರಂಗಗೊಳಿಸದು ಎಂದು ಅರ್ಜಿದಾರರ ಪರ ವಕೀಲ ಅಭಿಷೇಕ್ ಸಿಂಘ್ವಿ ವಾದಿಸಿದರು ಮತ್ತು ಮುಂದಿನ ವಿಚಾರಣೆಗೆ ಮುನ್ನ ಈ ಬಗ್ಗೆ ಕೇಂದ್ರ ಸರಕಾರವು ಉತ್ತರಿಸುವಂತೆ ಆದೇಶಿಸಬೇಕೆಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಸಿಸಿಟಿವಿ ಕ್ಯಾಮರಾ ಹಾಗೂ ವೆಬ್ಕಾಸ್ಟಿಂಗ್ ವೀಡಿಯೊಗಳಂತಹ ನಿರ್ದಿಷ್ಟ ಇಲೆಕ್ಟ್ರಾನಿಕ್ ದಾಖಲೆಗ ಸಾರ್ವಜನಿಕ ಪರಿಶೀಲನೆಯನ್ನು ತಡೆಗಟ್ಟಲು ಕೇಂದ್ರ ಸರಕಾರವು ಚುನಾವಣಾ ಕಾನೂನನ್ನು ತಿರುಚಿದೆ.

ಚುನಾವಣಾ ಪ್ರಕ್ರಿಯೆಯ ಪ್ರಾಮಾಣಿಕತೆಯು ಅತ್ಯಂತ ವೇಗವಾಗಿ ಕ್ಷೀಣಿಸುತ್ತಿದೆ.ಅದನ್ನು ಮರುಸ್ಥಾಪಿಸಲು ಸುಪ್ರೀಂಕೋರ್ಟ್ ನೆರವಾಗಲಿದೆ ಎಂಬ ಆಶಾವಾದವನ್ನು ಹೊಂದಿದ್ದೇವೆ’’ ಎಂದು ರಮೇಶ್ ಅರ್ಜಿಯಲ್ಲಿ ಹೇಳಿದ್ದಾರೆ.

ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಸಿಂಘ್ವಿ ವಾದಿಸಿದ್ದರು.

ಚುನಾವಣಾ ಆಯೋಗದ ಶಿಫಾರಸಿನ ಆಧಾರದಲ್ಲಿ ಕೇಂದ್ರ ಕಾನೂನುಸಚಿವಾಲಯವು ಸಾರ್ವಜನಿಕರಿಗೆ ಮತದಾನದ ಸಿಸಿಟಿವಿ ದೃಶ್ಯಾವಳಿಗಳು ಮತ್ತಿತರ ದಾಖಲೆಗಳನ್ನು ಪಡೆಯುವುದನ್ನು ನಿರ್ಬಂಧಿಸಲು 1961ರ ಚುನಾವಣಾ ಕಾನೂನುಗಳ ನಿಯಮ ಸಂಖ್ಯೆ 93(2)(ಎ)ಗೆ ತಿದ್ದುಪಡಿ ತಂದಿತ್ತು.

ಜೈರಾಮ್ ರಮೇಶ್ ಅವರಲ್ಲದೆ ಸಾಮಾಜಿಕ ಹೋರಾಟಗಾರರಾದ ಶ್ಯಾಮ್ಲಾಲ್ ಪಾಲ್ ಹಾಗೂ ಅಂಜಲಿ ಭಾರದ್ವಾಜ್ ಅವರು ಈ ವಿಚಾರವಾಗಿ ಅರ್ಜಿಗಳನ್ನು ಸಲ್ಲಿಸಿದ್ದು, ಅದು ಇನ್ನೂ ಅಲಿಕೆಗೆ ಬಾಕಿಯಿದೆ.

ನ್ಯಾಯವಾದಿ ಪ್ರಶಾಂತ್ ಭೂಷಣ್ ಮೂಲಕ ಅರ್ಜಿ ಸಲ್ಲಿಸಿದ್ದ ಅಂಜಲಿ ಭಾರದ್ವಾಜ್ ಅವರು, ಚುನಾವಣಾ ಕಾನೂನುಗಳಿಗೆ ಕೇಂದ್ರ ಸರಕಾರವು ಇತ್ತೀಚೆಗೆ ಮಾಡಿರುವ ತಿದ್ದುಪಡಿಗಳು ಸಾರ್ವಜನಿಕರಿಗೆ ಚುನಾವಣಾ ಸಂಬಂಧಿ ದಾಖಲೆಗಳನ್ನು ಪಡೆಯುವ ಅವಕಾಶವನ್ನು ನಿರ್ಬಂಧಿಸುತ್ತವೆ ಎಂದು ಆಪಾದಿಸಿದ್ದರು.

"1995 ರ ಕಾಯ್ದೆಯಡಿ ಈಗಾಗಲೇ ನೋಡಿಫೈ ಮಾಡಿದ ಅಥವಾ ನೋಂದಾಯಿಸಲಾದ ಹಾಗೂ ದೀರ್ಘ ಕಾಲದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸುತ್ತಿರುವ (ವಕ್ಫ್ ಬೈ ಯೂಸರ್) ಆಸ್ತಿಗಳನ್ನು ಒಳಗೊಂಡಂತೆ ಯಾವುದೇ ವಕ್ಫ್ ಆಸ್ತಿಗಳನ್ನು ಡಿನೋಟಿಫೈ ಮಾಡುವಂತಿಲ್ಲ. ಜಿಲ್ಲಾಧಿಕಾರಿಗಳು ಅವುಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News