ಖ್ಯಾತ ಆಂಗ್ಲಾ ಭಾಷಾ ಕವಿ ಕೇಕಿ ದಾರುವಾಲಾ ನಿಧನ

Update: 2024-09-27 15:44 GMT

ಕೇಕಿ ಎನ್.ದಾರುವಾಲಾ |  PC  : thehindu.com

ಹೊಸದಿಲ್ಲಿ : ಭಾರತದಲ್ಲಿ ಆಂಗ್ಲಾ ಭಾಷೆಯ ಪ್ರವರ್ತಕ ಕವಿಗಳಲ್ಲಿ ಓರ್ವರಾಗಿದ್ದ ಕೇಕಿ ಎನ್.ದಾರುವಾಲಾ (87) ಅವರು ಶುಕ್ರವಾರ ನಿಧನರಾದರು.

ಲೂಧಿಯಾನಾದ ಸರಕಾರಿ ಕಾಲೇಜಿನಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು,1980-81ರಲ್ಲಿ ಕ್ವೀನ್ ಎಲಿಝಾಬೆತ್ ಹೌಸ್ ಫೆಲೋ ಆಗಿ ಆಕ್ಸಫರ್ಡ್‌ನಲ್ಲಿ ಒಂದು ವರ್ಷ ಕಳೆದಿದ್ದರು.

ದಾರುವಾಲಾ ಮಾಜಿ ಐಪಿಎಸ್ ಅಧಿಕಾರಿಯೂ ಆಗಿದ್ದು,ಅದು ಜೀವನದ ಕಠೋರ ವಾಸ್ತವಗಳನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಅವರಿಗೆ ಒದಗಿಸಿತ್ತು. ಇದರಿಂದ ಅವರು ತನ್ನ ಸಾಹಿತ್ಯ ಅನ್ವೇಷಣೆಗೆ ವಿಷಯಗಳನ್ನು ಪಡೆದುಕೊಂಡಿದ್ದರು.

12 ಕೃತಿಗಳನ್ನು ದಾರುವಾಲಾ ರಚಿಸಿದ್ದು,ಅವರ ಮೊದಲ ಕೃತಿ ‘ಫಾರ್ ಪೆಪ್ಪರ್ ಆ್ಯಂಡ್ ಕ್ರೈಸ್ಟ್ ’ 2009ರಲ್ಲಿ ಪ್ರಕಟಗೊಂಡಿತ್ತು, ತನ್ನ ಕವನ ಸಂಕಲನ ‘ಲ್ಯಾಂಡ್‌ಸ್ಕೇಪ್ಸ್’ಗಾಗಿ ಅವರು 1987ರಲ್ಲಿ ಕಾಮನ್ವೆಲ್ತ್ ಕವನ ಪ್ರಶಸ್ತಿಗೆ ಭಾಜನರಾಗಿದ್ದರು. 1984ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರನ್ನು ಅರಸಿಕೊಂಡು ಬಂದಿತ್ತು. 2014ರಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ಅವರ ಅಂತಿಮ ಕೃತಿ ‘ಲ್ಯಾಂಡ್‌ಫಾಲ್ : ಪೋಯೆಮ್ಸ್ ’ 2023ರಲ್ಲಿ ಪ್ರಕಟಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News