"ಇವಿಎಂ ತಿರುಚಲಾಗಿದೆ": ಪತಿಗೆ ಹಿನ್ನಡೆಯಾಗುತ್ತಿದ್ದಂತೆ ನಟಿ ಸ್ವರಾ ಭಾಸ್ಕರ್ ಆರೋಪ

Update: 2024-11-23 11:15 GMT

ಸ್ವರಾ ಭಾಸ್ಕರ್ , ಫಹಾದ್ ಅಹ್ಮದ್ | PC : X \ @FahadZirarAhmad

ಮುಂಬೈ: ಮಹಾರಾಷ್ಟ್ರದಲ್ಲಿ ಮತ ಎಣಿಕೆ ಮುಂದುವರಿದಿದ್ದು, ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಅವರು ಎಲೆಕ್ಟ್ರಾನಿಕ್ ಮತಯಂತ್ರಗಳ(ಇವಿಎಂ) ಕಾರ್ಯನಿರ್ವಹಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಶರದ್ ಪವಾರ್ ನೇತೃತ್ವದ ಎನ್ಸಿಪಿ ಬಣದ ಅಭ್ಯರ್ಥಿ ಮತ್ತು ಸ್ವರ ಭಾಸ್ಕರ್ ಅವರ ಪತಿ ಫಹಾದ್ ಅಹ್ಮದ್ ಅವರು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣದ ಅಭ್ಯರ್ಥಿ ಸನಾ ಮಲಿಕ್ ಅವರಿಗಿಂತ 3,000ಕ್ಕೂ ಹೆಚ್ಚು ಮತಗಳಿಂದ ಹಿನ್ನೆಡೆ ಸಾಧಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸ್ವರಾ ಭಾಸ್ಕರ್, ಅನುಶಕ್ತಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಫಹಾದ್ ಝಿರಾರ್ ಅಹ್ಮದ್ ಅವರು 17, 18, 19ನೇ ಸುತ್ತಿನವರೆಗೆ ಮುನ್ನಡೆ ಸಾಧಿಸಿದರೂ, ಇದ್ದಕ್ಕಿದ್ದಂತೆ 99% ಬ್ಯಾಟರಿ ಚಾರ್ಜ್ ಹೊಂದಿರುವ ಇವಿಎಂಗಳನ್ನು ತೆರೆಯಲಾಯ್ತು, ಬಳಿಕ ಬಿಜೆಪಿ ಬೆಂಬಲಿತ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿಯ ಅಭ್ಯರ್ಥಿ ಅಚ್ಚರಿಯಾಗಿ ಮುನ್ನಡೆ ಸಾಧಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇಡೀ ದಿನ ಮತ ಚಲಾಯಿಸಿದ್ದರೂ ಮತಯಂತ್ರಗಳಲ್ಲಿ 99% ಚಾರ್ಜ್ ಇರುವ ಬ್ಯಾಟರಿ ಇರಲು ಹೇಗೆ ಸಾಧ್ಯ? ಅಂತಹ ಎಲ್ಲಾ ಇವಿಎಂಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಹೇಗೆ ಹೆಚ್ಚು ಮತಗಳನ್ನು ಗಳಿಸಿದೆ ಎಂದು ಪ್ರಶ್ನಿಸಿ ಸ್ವರಾ ಭಾಸ್ಕರ್ ಅವರು ಪೋಸ್ಟ್ ನ್ನು ಚುನಾವಣಾ ಆಯೋಗಕ್ಕೆ ಮತ್ತು ಮಹಾ ವಿಕಾಸ್ ಅಘಾಡಿ ನಾಯಕರಿಗೆ ಟ್ಯಾಗ್ ಮಾಡಿದ್ದಾರೆ. ಸ್ವರಾ ಭಾಸ್ಕರ್ ಅವರ ಈ ಆರೋಪಕ್ಕೆ ಚುನಾವಣಾ ಆಯೋಗ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News