ಭಾರತ-ಬಾಂಗ್ಲಾ ಗಡಿಯಲ್ಲಿ ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ವಶಕ್ಕೆ
Update: 2024-08-24 10:48 GMT
ಢಾಕಾ: ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರನ್ನು ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಆರೋಪದಲ್ಲಿ, ಭಾರತದ ಈಶಾನ್ಯ ಗಡಿ ಸಿಲ್ಹೆಟ್‌ನಲ್ಲಿ ಬಂಧಿಸಲಾಗಿದೆ ಎಂದು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ತಿಳಿಸಿದೆ.
ಅವಾಮಿ ಲೀಗ್ ನಾಯಕ ಎಎಸ್‌ಎಂ ಫಿರೋಝ್ ಅವರನ್ನು, ಅವರ ನಿವಾಸದಿಂದ ಬಂಧಿಸಿದ ನಂತರ ಈ ವರದಿ ಬಂದಿದೆ.
ಬಿಜಿಬಿ ಪ್ರಧಾನ ಕಚೇರಿಯು ಎಸ್‌ಎಂಎಸ್‌ನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಸಿಲ್ಹೆಟ್‌ನ ಕನೈಘಾಟ್ ಗಡಿಯ ಮೂಲಕ ಭಾರತಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಶಂಸುದ್ದೀನ್ ಚೌಧರಿ ಮಾಣಿಕ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ. ಮಾಣಿಕ್ ಅವರನ್ನು ಮಧ್ಯರಾತ್ರಿಯವರೆಗೆ ಬಿಜಿಬಿ ಹೊರಠಾಣೆಯಲ್ಲಿ ಇರಿಸಲಾಗಿತ್ತು ಪ್ರಥಮ್ ಅಲೋ ಪತ್ರಿಕೆ ಹೇಳಿದೆ.