ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 500 ರನ್: 28 ವರ್ಷ ಹಳೆಯ ದಾಖಲೆ ಮುರಿದ ಪ್ರತಿಕಾ ರಾವಲ್

Update: 2025-04-29 22:02 IST
Pratika Rawal

 ಪ್ರತಿಕಾ ರಾವಲ್ | PC : X 

  • whatsapp icon

ಹೊಸದಿಲ್ಲಿ: ಭಾರತದ ಉದಯೋನ್ಮುಖ ಆಟಗಾರ್ತಿ ಪ್ರತಿಕಾ ರಾವಲ್ ಮಹಿಳೆಯರ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ವೇಗವಾಗಿ 500 ರನ್ ಗಳಿಸಿದ ಸಾಧನೆ ಮಾಡಿದರು. ಕೇವಲ 8 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದರು.

ಈ ಸಾಧನೆಯ ಮೂಲಕ ರಾವಲ್ ಅವರು ಇಂಗ್ಲೆಂಡ್‌ನ ಶ್ರೇಷ್ಠ ಆಟಗಾರ್ತಿ ಚಾರ್ಲೊಟ್ ಎಡ್ವರ್ಡ್ಸ್ ನಿರ್ಮಿಸಿದ್ದ ದೀರ್ಘಕಾಲದ ದಾಖಲೆಯನ್ನು ಮುರಿದರು. ಎಡ್ವರ್ಡ್ಸ್ 1997ರಲ್ಲಿ 9 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ಶ್ರೀಲಂಕಾದಲ್ಲಿ ಈಗ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 78 ರನ್ ಗಳಿಸುವ ಹಾದಿಯಲ್ಲಿ ರಾವಲ್ ಈ ಮೈಲಿಗಲ್ಲು ತಲುಪಿದ್ದಾರೆ. ಭಾರತವು 6 ವಿಕೆಟ್‌ಗಳ ನಷ್ಟಕ್ಕೆ 276 ರನ್ ಗಳಿಸಿದೆ.

24ರ ಹರೆಯದ ರಾವಲ್ ಇದೀಗ ಏಕದಿನ ಕ್ರಿಕೆಟ್‌ನಲ್ಲಿ 81.71ರ ಸರಾಸರಿಯಲ್ಲಿ, 92.71ರ ಸ್ಟ್ರೈಕ್‌ರೇಟ್‌ನಲ್ಲಿ 5 ಅರ್ಧಶತಕ ಹಾಗೂ ಶತಕ ಸಹಿತ 572 ರನ್ ಗಳಿಸಿದೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ಬಾರಿ ಪಂದ್ಯಶ್ರೇಷ್ಠ ಹಾಗೂ 1 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿರುವ ರಾವಲ್ ಅವರು ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1,000 ರನ್ ಪೂರೈಸುವ ವಿಶ್ವಾಸದಲ್ಲಿದ್ದಾರೆ. ಆಸ್ಟ್ರೇಲಿಯದ ಲಿಂಡ್ಸೆ ರೀಲರ್(23 ಇನಿಂಗ್ಸ್)ಹೆಸರಲ್ಲಿ ಈ ದಾಖಲೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News