150 ಕೆಜಿ ಭಾರದ, 20 ಅಡಿ ಉದ್ದದ ಮೊಸಳೆಯನ್ನು ಭುಜದ ಮೇಲೆ ಹೊತ್ತ ಅರಣ್ಯ ಇಲಾಖೆ ಸಿಬ್ಬಂದಿ: ವಿಡಿಯೋ ವೈರಲ್‌

Update: 2024-11-30 11:30 GMT

PC :  X \ @ManojSh28986262

ಕಾನ್ಪುರ: ಹಮೀರ್‌ಪುರ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು 20 ಅಡಿ ಉದ್ದದ ಮತ್ತು 150 ಕೆಜಿ ತೂಕದ ಭಾರೀ ದೊಡ್ಡ ಜೀವಂತ ಮೊಸಳೆಯನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಕಳೆದ ಮೂರು ವಾರಗಳಿಂದ ಗ್ರಾಮದ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದ ಮೊಸಳೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹಿಡಿದಿದ್ದು, ಈ ಘಟನೆಯ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆದಿದೆ.

ಸುಮಾರು ಮೂರು ವಾರಗಳ ಹಿಂದೆ, ಪುಥಿಯಾ ಖುರ್ದ್ ಗ್ರಾಮದ ಬೆಟ್ವಾ ನದಿ ತಟದ ಕೊಳದಲ್ಲಿ ಭಾರೀ ಗಾತ್ರದ ಮೊಸಳೆ ಕಾಣಿಸಿಕೊಂಡಿತ್ತು. ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡ ಬಳಿಕ, ನೀರಿಗಾಗಿ ಕೊಳದ ಬಳಿಗೆ ಬರುವ ಸ್ಥಳೀಯ ನಿವಾಸಿಗಳು ಪ್ರದೇಶಕ್ಕೆ ಬರಲು ಹಿಂಜರಿಯುತ್ತಿದ್ದರು.

ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯ ಚಟುವಟಿಕೆಗಳ ಮೇಲೆ ಹಲವು ದಿನಗಳ ಕಾಲ ನಿಗಾ ಇರಿಸಿದ್ದರು. ಬಳಿಕ ಗ್ರಾಮಸ್ಥರ ಸಹಾಯದಿಂದ ಬಲೆಗೆ ಬೀಳಿಸಿ ಬೇರೆ ಸ್ಥಳಕ್ಕೆ ವರ್ಗಾಯಿಸಲು ತಂತ್ರವನ್ನು ರೂಪಿಸಿದ್ದು, ಅರಣ್ಯ ಇಲಾಖೆ ತಂಡವು ಸೋಮವಾರ ಮೊಸಳೆಯನ್ನು ಸೆರೆಹಿಡಿದಿದೆ. ನಂತರ ಅದನ್ನು ಬೆಟ್ವಾ ಮತ್ತು ಯಮುನಾ ನದಿಗಳ ಸಂಗಮದಲ್ಲಿ ಬಿಡಲಾಯಿತು ಎಂದು ಅರಣ್ಯಾಧಿಕಾರಿ ಜೆಪಿ ಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News