ಬಲು ದುಬಾರಿಯಾದ ಚಿನ್ನ; ಇಂದಿನ ಬೆಲೆ ಎಷ್ಟು?

Update: 2025-03-19 12:25 IST
ಬಲು ದುಬಾರಿಯಾದ ಚಿನ್ನ; ಇಂದಿನ ಬೆಲೆ ಎಷ್ಟು?

ಸಾಂದರ್ಭಿಕ ಚಿತ್ರ (PTI)

  • whatsapp icon

ಬೆಂಗಳೂರು : ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ.ಗೆ 8290 ರೂ. ಗೆ ಮಾರಾಟವಾಗಿದೆ. ಅದರಂತೆ ಒಂದು ಪವನ್ ಅಂದರೆ 8 ಗ್ರಾಂ. ಚಿನ್ನದ ದರವು 66320 ರೂ. ನಂತೆ ಮಾರಾಟವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.

ಬೇಸಿಗೆ ರಜೆ ಸಮೀಪಿಸುತ್ತಿರುವಂತೆ ಮದುವೆಯ ಸೀಸನ್ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ದರ ನಾಗಾಲೋಟದಲ್ಲಿ ಮುಂದುವರಿದಿದೆ ಎಂಬ ವಿಶ್ಲೇಷಣೆ ಚಿನಿವಾರ ಪೇಟೆಯಲ್ಲಿ ನಡೆದಿದೆ. ಇಂದಿನ ಚಿನ್ನದ ಬೆಲೆ ಏರಿಕೆಯ ಸಾರ್ವಕಾಲಿಕ ಗರಿಷ್ಠವಾಗಿದೆ.

ಅಪ್ಪಟ ಚಿನ್ನ ಅಂದರೆ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 9018.3 ರೂ.ಆಗಿದ್ದು, 460 ರೂ. ಹೆಚ್ಚಾಗಿದೆ.

ದಿಲ್ಲಿಯಲ್ಲಿ ಬುಧವಾರ ಚಿನ್ನದ ದರ 10 ಗ್ರಾಂ ಗೆ 90183 ರೂ. ನಂತೆ ಮಾರಾಟವಾಗಿದೆ. ನಿನ್ನೆ ಅಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 89833 ರೂ. ಇತ್ತು.

ಚೆನ್ನೈನಲ್ಲಿ ಬುಧವಾರ ಚಿನ್ನದ ಬೆಲೆ 10 ಗ್ರಾಂ. ಗೆ 90031 ರೂ. ಗೆ ಮಾರಾಟವಾಗಿದೆ. ನಿನ್ನೆ ಅಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 89681 ರೂ. ಇತ್ತು.

ಮುಂಬೈನಲ್ಲಿ ಬುಧವಾರ ಚಿನ್ನದ ದರ 10 ಗ್ರಾಂ 90037 ರೂ. ಗೆ ಮಾರಾಟವಾಗಿದೆ. ಅಲ್ಲಿ ನಿನ್ನೆ ಚಿನ್ನದ ಬೆಲೆಯು 10 ಗ್ರಾಂ. ಗೆ 89687 ರೂ. ಇತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News