ಗುಜರಾತ್ | 5 ಸಂಸದರ ಸಂಪತ್ತು ದುಪ್ಪಟ್ಟಿಗಿಂತಲೂ ಅಧಿಕ

Update: 2024-06-08 16:27 GMT

PC : NDTV 

ಅಹ್ಮದಾಬಾದ್ : ಗುಜರಾತ್ನಿಂದ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಐವರ ಸಂಪತ್ತು ಐದು ವರ್ಷಗಳ ಅವಧಿಯಲ್ಲಿ ದುಪ್ಪಟ್ಟಿಗಿಂತಲೂ ಅಧಿಕವಾಗಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ನ ವರದಿಯೊಂದು ತಿಳಿಸಿದೆ.

ಗುಜರಾತ್ನ ಒಟ್ಟು 26 ಸಂಸದರ ಪೈಕಿ 12 ಮಂದಿ ಈ ಚುನಾವಣೆಯಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. 23 ಸಂಸದರು ಕೋಟ್ಯಾಧೀಶರಾಗಿದ್ದಾರೆ. ಐವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ.

ಗುಜರಾತ್ ಸಂಸದರ ಸಂಪತ್ತು ಕಳೆದ ಐದು ವರ್ಷಗಳ ಅವಧಿಯಲ್ಲಿ 112 ಶೇಕಡದಿಂದ 273 ಶೇಕಡಕ್ಕೆ ವೃದ್ದಿಯಾಗಿದೆ ಎಂದು ವರದಿ ತಿಳಿಸುತ್ತದೆ. ಭರೂಚ್ನಿಂದ ಏಳು ಬಾರಿ ಗೆದ್ದಿರುವ ಬಿಜೆಪಿ ಸಂಸದ ಮನ್ಸುಖ್ ಭಾಯ್ ವಸವ್ ಅವರ ಸಂಪತ್ತು ಈ ಅವಧಿಯಲ್ಲಿ ಗರಿಷ್ಠ ಅಂದರೆ 273 ಶೇಕಡದಷ್ಟು ವೃದ್ಧಿಯಾಗಿದೆ. ಅವರ ಸಂಪತ್ತು 68.35 ಲಕ್ಷ ರೂ.ನಿಂದ 2.54 ಕೋಟಿ ರೂ.ಗೆ ಏರಿದೆ.

ಜಾಮ್ನಗರದ ಸಂಸದೆ ಪೂನಮ್ ಮೇಡಮ್ರ ಸಂಪತ್ತು 2019ರಲ್ಲಿದ್ದ 42.73 ಕೋಟಿ ರೂಪಾಯಿಯಿಂದ 2024ರಲ್ಲಿ 147.70 ಕೋಟಿ ರೂ.ಗೆ ಏರಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News