ಯೂಟ್ಯೂಬ್ ಇಂಡಿಯಾದ ನೂತನ ಎಂ.ಡಿ.ಯಾಗಿ ಗುಂಜನ್ ಸೋನಿ

ಗುಂಜನ್ ಸೋನಿ | PC : X
ಹೊಸದಿಲ್ಲಿ: ಯೂಟ್ಯೂಬ್ ನ ಭಾರತ ವಲಯದ ವ್ಯವಸ್ಥಾಪಕ ನಿರ್ದೇಶಕಿ(ಎಂ.ಡಿ.)ಯಾಗಿ ಗುಂಜನ್ ಸೋನಿ ನೇಮಕಗೊಂಡಿದ್ದಾರೆ.
ಸೋನಿ ಈ ಹಿಂದೆ ಮೈಂತ್ರಾ ಮತ್ತು ಸ್ಟಾರ್ ಇಂಡಿಯಾಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು. ಕಳೆದ ವರ್ಷ ಇಷಾನ್ ಚಟರ್ಜಿಯವರ ನಿರ್ಗಮನದಿಂದ ತೆರವಾಗಿರುವ ಯೂಟ್ಯೂಬ್ ಇಂಡಿಯಾದ ಎಂ.ಡಿ.ಹುದ್ದೆಯನ್ನು ಅವರು ನಿರ್ವಹಿಸಲಿದ್ದಾರೆ.
ಯೂಟ್ಯೂಬ್ ಗೆ ಸೇರುವ ಮುನ್ನ ಸೋನಿ ಸಿಂಗಾಪುರ ಮೂಲದ ಇ-ಕಾಮರ್ಸ್ ತಾಣವಾದ ಝಲೋರಾದಲ್ಲಿ ಆರು ವರ್ಷಗಳ ಕಾಲ ಗ್ರೂಪ್ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು.
ಉದ್ಯಮ, ತಂತ್ರಜ್ಞಾನ, ಮಾರಾಟ ಮತ್ತು ಇ-ಕಾಮರ್ಸ್ ಕ್ಷೇತ್ರಗಳಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಸೋನಿ ಭಾರತದಲ್ಲಿ ಯೂಟ್ಯೂಬ್ ನ ಬೆಳವಣಿಗೆ ಮತ್ತು ಆವಿಷ್ಕಾರ ಪ್ರಯತ್ನಗಳನ್ನು ಮುನ್ನಡೆಸಲು ಸಜ್ಜಾಗಿದ್ದಾರೆ ಎಂದು ಆಲ್ಫಾಬೆಟ್ ಒಡೆತನದ ವೀಡಿಯೊ ಪ್ಲ್ಯಾಟ್ಫಾರ್ಮ್ ಹೇಳಿಕೆಯಲ್ಲಿ ತಿಳಿಸಿದೆ.
ಸೋನಿ ಫಾರ್ಚ್ಯೂನ್ 500 ಕಂಪನಿಯಾಗಿರುವ ಸಿಬಿಆರ್ಇ ಗ್ರೂಪ್ ನ ಆಡಳಿತ ಮಂಡಳಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.