ಮಣಿಪುರದ ಜನತೆಗೆ ಶುಭಾಶಯ ಕೋರುವ ಪ್ರಧಾನಿಗೆ ಅಲ್ಲಿಗೆ ಭೇಟಿ ನೀಡಲು ಸಮಯ ಸಿಕ್ಕಿಲ್ಲವೇ?: ಕಾಂಗ್ರೆಸ್ ಪ್ರಶ್ನೆ

Update: 2024-01-21 16:27 GMT

ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ಮಣಿಪುರ ರಾಜ್ಯ ಸ್ಥಾಪನಾ ದಿನದಂದು ಜನತೆಗೆ ಶುಭಾಶಯ ಕೋರುವ ಪ್ರಧಾನಿ ನರೇಂದ್ರ ಮೋದಿಗೆ ಅಲ್ಲಿಗೆ ಭೇಟಿ ನೀಡಲು ಇನ್ನೂ ಸಮಯ ಸಿಕ್ಕಿಲ್ಲವೇ? ಎಂದು ಕಾಂಗ್ರೆಸ್ ರವಿವಾರ ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲ ತಾಣ ‘ಎಕ್ಸ್’ ಮೂಲಕ ಮಣಿಪುರದ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಆದರೆ, ರಾಜ್ಯಕ್ಕೆ ಭೇಟಿ ನೀಡಲು ಅವರಿಗೆ ಸಮಯ ಸಿಕ್ಕಿಲ್ಲವೇ? ಅಥವಾ ಅಗತ್ಯ ಎಂದು ಭಾವಿಸಿಲ್ಲವೇ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

2023 ಮೇ 3ರಿಂದ ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದೆ. ಸಾಮಾಜಿಕ ಸಾಮರಸ್ಯ ನಾಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ. ಅವರು ರಾಜ್ಯದ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದ ಮೂಲಕ ಪ್ರಧಾನಿ ಅವರು ನೀಡಿದ ಶುಭಾಶಯಗಳು ಆಷಾಢಭೂತಿತನಕ್ಕೆ ಇನ್ನೊಂದು ನಿದರ್ಶನವಾಗಿದೆ ಎಂದು ಅವರು ಹೇಳಿದರು.

‘‘ಮಣಿಪುರದ ರಾಜ್ಯ ಸ್ಥಾಪನಾ ದಿನಕ್ಕೆ ಜನತೆಗೆ ನನ್ನ ಶುಭಾಶಯಗಳು. ಭಾರತದ ಪ್ರಗತಿಗೆ ಮಣಿಪುರ ಮಹತ್ವದ ಕೊಡುಗೆ ನೀಡಿದೆ. ನಾವು ಮಣಿಪುರದ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುತ್ತೇವೆ. ಮಣಿಪುರದ ನಿರಂತರ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇವೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.

ಈ ಪೋಸ್ಟ್ ನ ಹಿನ್ನೆಲೆಯಲ್ಲಿ ಜೈರಾಮ್ ರಮೇಶ್ ಅವರು ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News