ಗಣೇಶನ ವಿಗ್ರಹವನ್ನು ತಾನೇ ಒಡೆದು ನಂತರ ಇಬ್ಬರು ಮುಸ್ಲಿಂ ಯುವಕರ ವಿರುದ್ಧ ಪೊಲೀಸ್‌ ದೂರು ದಾಖಲಿಸಿದ ಅರ್ಚಕ: ವರದಿ

Update: 2024-07-18 17:21 IST
ಗಣೇಶನ ವಿಗ್ರಹವನ್ನು ತಾನೇ ಒಡೆದು ನಂತರ ಇಬ್ಬರು ಮುಸ್ಲಿಂ ಯುವಕರ ವಿರುದ್ಧ ಪೊಲೀಸ್‌ ದೂರು ದಾಖಲಿಸಿದ ಅರ್ಚಕ: ವರದಿ

Screengrab: X/@zoo_bear

  • whatsapp icon

ಹೊಸದಿಲ್ಲಿ: ಗಣಪತಿ ದೇವರ ವಿಗ್ರಹವನ್ನು ತಾನೇ ಒಡೆದು ನಂತರ ಈ ಆರೋಪವನ್ನು ಇಬ್ಬರು ಮುಸ್ಲಿಂ ವ್ಯಕ್ತಿಗಳ ಮೇಲೆ ಹೊರಿಸಿದ ಅರ್ಚಕನೊಬ್ಬನ ವಿರುದ್ಧ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು thewire.in ವರದಿ ಮಾಡಿದೆ.

ಕೃಚ್‌ ರಾಮ್‌ ಎಂಬ ಹೆಸರಿನ ಅರ್ಚಕ ಜುಲೈ 16ರಂದು ಕಥೇಲಾ ಸಮಯಮತಾತಾ ಪೊಲೀಸ್‌ ಠಾಣೆಯಲ್ಲಿ ದೂರೊಂದನ್ನು ನೀಡಿ ಮನ್ನನ್‌ ಮತ್ತು ಸೋನು ಎಂಬ ಇಬ್ಬರು ಮುಸ್ಲಿಂ ವ್ಯಕ್ತಿಗಳು ತೌಲಿಹವಾಹ್‌ ಗ್ರಾಮದಲ್ಲಿರುವ ತನ್ನ ದೇವಸ್ಥಾನದಲ್ಲಿರುವ ಗಣೇಶ ವಿಗ್ರಹವನ್ನು ಮುರಿದಿದ್ದಾರೆ ಎಂದು ದೂರಿದ್ದ.

ಆರೋಪಿಗಳು ತನಗೆ ಬೆದರಿಕೆ ಒಡ್ಡಿದ್ದರು ಹಾಗೂ ಪೂಜೆ ನಡೆಸಲು ಬಿಡುವುದಿಲ್ಲ ಎಂದು ಬೆದರಿಸಿದ್ದರು ಎಂದೂ ದೂರಿನಲ್ಲಿ ಹೇಳಲಾಗಿತ್ತು. ಅಷ್ಟೇ ಅಲ್ಲದೆ ತನ್ನ ಪತ್ನಿ ಮಧ್ಯಪ್ರವೇಶಿಸಿದಾಗ ಆಕೆಗೂ ಥಳಿಸಿದ್ದರು ಎಂದು ದೂರಿದ್ದ.

ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಗಣೇಶ ವಿಗ್ರಹವನ್ನು ಆರೋಪಿಯೇ ಒಡೆದಿದ್ದ ಎಂದು ತಿಳಿದು ಬಂದಿತ್ತಲ್ಲದೆ ಕೆಲ ಮಕ್ಕಳು ಆತನ ಕೃತ್ಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು.

ಇದರ ಬೆನ್ನಲ್ಲೇ ಅರ್ಚಕನನ್ನು ವಿಚಾರಣೆ ನಡೆಸಲಾಗಿತ್ತು. ಆತ ಮೂರ್ತಿಗಳನ್ನು ಒಡೆದಾಗ ಅಲ್ಲಿ ಮೂರ್ನಾಲ್ಕು ಮಕ್ಕಳು ಆಡುತ್ತಿದ್ದರು.

ಅರ್ಚಕನಿಗೂ ಇಬ್ಬರು ಮುಸ್ಲಿಂ ಯುವಕರಿಗೂ ಈ ಹಿಂದೆಯೇ ಯಾವುದೇ ವಿಷಯದ ಕುರಿತು ತಕರಾರಿತ್ತು. ಈ ಕಾರಣ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿತ್ತು. ವಿಚಾರಣೆ ವೇಲೆ ಅರ್ಚಕ ತಪ್ಪೊಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News