ಪ್ರಾಣಿ ವಧೆ ಫೋಟೊ ಹಂಚಿಕೊಂಡ ಆರೋಪ: ವ್ಯಾಪಾರಿಯ ಅಂಗಡಿ ಧ್ವಂಸಗೊಳಿಸಿದ ಸಂಘ ಪರಿವಾರ ಕಾರ್ಯಕರ್ತರು
ಶಿಮ್ಲಾ: ಪ್ರಾಣಿ ವಧೆಯ ಫೋಟೊವನ್ನು ವಾಟ್ಸಪ್ ಸ್ಟೇಟಸ್‍ನಲ್ಲಿ ಹಂಚಿಕೊಂಡ ಆರೋಪದಲ್ಲಿ ಸಂಘ ಪರಿವಾರ ಕಾರ್ಯಕರ್ತರ ಗುಂಪು ಮುಸ್ಲಿಂ ಸಮುದಾಯದ ವ್ಯಕ್ತಿಗೆ ಸೇರಿದ ಜವಳಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿ ಅಂಗಡಿಯನ್ನು ಧ್ವಂಸಗೊಳಿಸಿದ ಪ್ರಕರಣ ಹಿಮಾಚಲ ಪ್ರದೇಶದ ನಹಾನ್ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ
ಪೊಲೀಸರು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದಂತೆಯೇ ಅಂಗಡಿಯನ್ನು ಧ್ವಂಸಗೊಳಿಸಿರುವ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಳಿಗೊಳಗಾದ ವ್ಯಕ್ತಿಯನ್ನು ಜಾವೇದ್ ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಉತ್ತರಪ್ರದೇಶದ ಸಹರನಪುರದವರು. ಹಲವು ವರ್ಷಗಳಿಂದ ನಹಾನ್ ಪಟ್ಟಣದಲ್ಲಿ ವ್ಯಾಪಾರ ಮಾಡಿಕೊಂಡಿದ್ದರು.
ಅಂಗಡಿಯನ್ನು ಧ್ವಂಸಗೊಳಿಸಿದ ಗುಂಪು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಕೈಗೊಂಡಿತು. ʼಗೋಲಿ ಮಾರೋ ಸಾಲೋ ಕೋʼ, ʼಜೈಶ್ರೀರಾಂʼ ಘೋಷಣೆಗಳನ್ನು ಕೂಗುತ್ತಾ ಗುಂಪು ಜಾಥಾ ನಡೆಸಿತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ವ್ಯಾಪಾರಿಗಳ ಸಂಘ ಸೇರಿದಂತೆ ಹಲವು ಹಿಂದುತ್ವ ಗುಂಪುಗಳು ಕರೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಪೊಲೀಸರಿಗೆ ದೂರು ನೀಡಿರುವ ಈ ಗುಂಪು, ಪ್ರಾಣಿವಧೆಯ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
In Himachal, a Hindutva mob attacked the Muslim man's shop in front of the police, looting and vandalizing it after he shared a picture of an animal sacrifice on his WhatsApp status. pic.twitter.com/0ep7gcfDaL
— Meer Faisal (@meerfaisal001) June 19, 2024