ಹೈದರಾಬಾದ್: ಎ.19ರಂದು ವಕ್ಫ್ ಕಾಯ್ದೆ ವಿರುದ್ಧ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಿಂದ ಪ್ರತಿಭಟನಾ ಸಭೆ

Update: 2025-04-13 22:04 IST
Owaisi

ಅಸದುದ್ದೀನ್ ಉವೈಸಿ | PC : PTI 

  • whatsapp icon

ಹೈದರಾಬಾದ್: ಅಖಿಲ ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು(ಎಐಎಂಪಿಎಲ್‌ಬಿ) ಎ.19ರಂದು ಇಲ್ಲಿ ವಕ್ಫ್(ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನಾ ಸಭೆಯನ್ನು ನಡೆಸಲಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಅವರು ರವಿವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಾರುಸ್ಸಲಾಮ್ (ಎಐಎಂಐಎಂ ಮುಖ್ಯ ಕಚೇರಿ)ನಲ್ಲಿ ಸಂಜೆ 7ರಿಂದ ರಾತ್ರಿ 10 ಗಂಟೆಯವರೆಗೆ ಎಐಎಂಪಿಎಲ್‌ಬಿ ಅಧ್ಯಕ್ಷ ಖಾಲಿದ್ ಸೈಫುಲ್ಲಾ ರಹಮಾನಿಯವರ ನೇತೃತ್ವದಲ್ಲಿ ಸಭೆಯು ನಡೆಯಲಿದೆ ಎಂದು ತಿಳಿಸಿದರು.

ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಂದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು ಹಾಗೂ ಉಭಯ ರಾಜ್ಯಗಳ ಇತರ ಮುಸ್ಲಿಂ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದು,ವಕ್ಫ್ (ತಿದ್ದುಪಡಿ) ಕಾಯ್ದೆಯು ಹೇಗೆ ವಕ್ಫ್ ಪರವಾಗಿಲ್ಲ ಎನ್ನುವುದನ್ನು ವಿವರಿಸಿ ಭಾಷಣಗಳನ್ನು ಮಾಡಲಿದ್ದಾರೆ ಎಂದರು.

‘ಸಂಸತ್ ವಕ್ಫ್ ಸಮಿತಿ ಸದಸ್ಯರೊಂದಿಗೆ ಮಾತನಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಅವರಿಗೆ ಸಮಯಾವಕಾಶ ಸಿಕ್ಕಿದರೆ ಅವರೂ ಈ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಬಹುದು’ ಎಂದು ಉವೈಸಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News