ಅಮೆರಿಕದಲ್ಲಿ ನೆಲೆಸಿದ್ದ 119 ಅಕ್ರಮ ಭಾರತೀಯ ವಲಸಿಗರು ನಾಳೆ ಭಾರತಕ್ಕೆ

Update: 2025-02-14 23:02 IST
ಅಮೆರಿಕದಲ್ಲಿ ನೆಲೆಸಿದ್ದ 119 ಅಕ್ರಮ ಭಾರತೀಯ ವಲಸಿಗರು ನಾಳೆ ಭಾರತಕ್ಕೆ

ಸಾಂದರ್ಭಿಕ ಚಿತ್ರ | indiatoday

  • whatsapp icon

ಗುವಾಹಟಿ: ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಎರಡು ವಿಮಾನಗಳು ಅಮೃತಸರದ ಗುರು ರಾಮ ದಾಸ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫೆಬ್ರವರಿ 15 ಹಾಗೂ 16ರಂದು ಬಂದಿಳಿಯುವ ಸಾಧ್ಯತೆ ಇದೆ.

119 ಅಕ್ರಮ ಭಾರತೀಯ ವಲಸಿಗರ ಎರಡನೇ ತಂಡವನ್ನು ಹೊತ್ತ ಅಮೆರಿಕದ ವಿಮಾನ ಫೆಬ್ರವರಿ 15ರಂದು ಅಮೃತಸರ ವಿಮಾನ ನಿಲ್ದಾಣದಲ್ಲಿ ರಾತ್ರಿ 10 ಗಂಟೆಗೆ ಇಳಿಯಲಿದೆ ಎಂದು ಮೂಲಗಳು ತಿಳಿಸಿವೆ.

119 ಅಕ್ರಮ ಭಾರತೀಯ ವಲಸಿಗರ ಪೈಕಿ ಪಂಜಾಬ್‌ನ 67, ಹರಿಯಾಣದ 33, ಗುಜರಾತಿನ 8, ಉತ್ತರಪ್ರದೇಶದ ಮೂವರು, ಮಹಾರಾಷ್ಟ್ರ, ರಾಜಸ್ಥಾನ, ಗೋವಾದ ತಲಾ ಇಬ್ಬರು ಹಾಗೂ ಹಿಮಾಚಲಪ್ರದೇಶ ಹಾಗೂ ಜಮ್ಮು-ಕಾಶ್ಮೀರದ ತಲಾ ಒಬ್ಬರು ಇದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಲ್ಲದೆ, ಇನ್ನಷ್ಟು ಅಕ್ರಮ ಭಾರತೀಯರ ವಲಸಿಗರನ್ನು ಹೊತ್ತ ಇನ್ನೊಂದು ವಿಮಾನ ಫೆಬ್ರವರಿ 16ರಂದು ಭಾರತಕ್ಕೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಕಳೆದ ವಾರ 104 ಅಕ್ರಮ ಭಾರತೀಯ ವಲಸಿಗರಿದ್ದ ವಿಮಾನ ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಅದರಲ್ಲಿ ಪಂಜಾಬ್‌ನ 30 ಮಂದಿ, ಹರ್ಯಾಣ, ಗುಜರಾತ್‌ನ ತಲಾ 33 ಮಂದಿ, ಮಹಾರಾಷ್ಟ್ರ, ಉತ್ತರಪ್ರದೇಶ ತಲಾ 3 ಮಂದಿ ಹಾಗೂ ಚಂಡಿಗಢದ ಇಬ್ಬರು ಇದ್ದರು.

ವಿವಿಧ ದೇಶಗಳಿಂದ ಬಂದಿರುವ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರ ತೆಗೆದುಕೊಂಡ ಕ್ರಮದ ಭಾಗವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News