ಭಾರತದ ಸೇನಾ ವೆಚ್ಚ ಪಾಕಿಸ್ತಾನಕ್ಕಿಂತ ಎಷ್ಟು ಪಟ್ಟು ಅಧಿಕ ಗೊತ್ತೇ?

Update: 2025-04-29 07:48 IST
ಭಾರತದ ಸೇನಾ ವೆಚ್ಚ ಪಾಕಿಸ್ತಾನಕ್ಕಿಂತ ಎಷ್ಟು ಪಟ್ಟು ಅಧಿಕ ಗೊತ್ತೇ?

PC | timesofindia

  • whatsapp icon

ಹೊಸದಿಲ್ಲಿ: ಸೇನಾ ವೆಚ್ಚದಲ್ಲಿ ಭಾರತ ವಿಶ್ವದಲ್ಲೇ ಐದನೇ ಸ್ಥಾನದಲ್ಲಿದ್ದು, ಪಾಕಿಸ್ತಾನಕ್ಕಿಂತ ಒಂಬತ್ತು ಪಟ್ಟು ಅಧಿಕ ಮೊತ್ತವನ್ನು ಮಿಲಿಟರಿ ವ್ಯವಸ್ಥೆಗೆ ಭಾರತ ವೆಚ್ಚ ಮಾಡುತ್ತಿದೆ. ಆದರೆ ಮತ್ತೊಂದು ಅಣ್ವಸ್ತ್ರ ಶಕ್ತ ದೇಶವಾಗಿರುವ ಚೀನಾದ ಜತೆ ಭಾರತ ಪೈಪೋಟಿಗೆ ಇಳಿದಿದ್ದು, ಆ ದೇಶ ಭಾರತಕ್ಕಿಂತ ನಾಲ್ಕುಪಟ್ಟು ಅಧಿಕ ಮೊತ್ತವನ್ನು ಸೇನೆಗೆ ವೆಚ್ಚ ಮಾಡುತ್ತಿದೆ.

ಶೀತಲ ಸಮರ ಅಂತ್ಯದ ಬಳಿಕ ಇದೇ ಮೊದಲ ಬಾರಿಗೆ ಮಿಲಿಟರಿ ವೆಚ್ಚ ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರೀ ಏರಿಕೆ ಕಂಡಿದೆ, ವಿಶ್ವದ ವಿವಿಧೆಡೆ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷದಿಂದಾಗಿ ಮಿಲಿಟರಿ ವೆಚ್ಚ ದಾಖಲೆ 2,179 ಶತಕೋಟಿ ಡಾಲರ್ ತಲುಪಿದೆ. ಅಮೆರಿಕ, ಚೀನಾ, ರಷ್ಯಾ ಹಾಗೂ ಜರ್ಮನಿ ಹೊರತುಪಡಿಸಿದರೆ ಭಾರತ ಐದನೇ ಸ್ಥಾನದಲ್ಲಿದೆ.

ಜಾಗತಿಕವಾಗಿ ಮಿಲಿಟರಿ ವೆಚ್ಚ ಹಿಂದಿನ ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ಶೇಕಡ 9.4ರಷ್ಟು ಹೆಚ್ಚಿದೆ. ಅಗ್ರ ಐದು ರಾಷ್ಟ್ರಗಳ ಮಿಲಿಟರಿ ವೆಚ್ಚ ಒಟ್ಟು ಖರ್ಚಿನ ಶೇ.60ರಷ್ಟಾಗಿದೆ. ಅಂದರೆ ಅಗ್ರ ಐದು ದೇಶಗಳು ಸುಮಾರು 1,635 ಶತಕೋಟಿ ರೂಪಾಯಿಗಳನ್ನು ಸೇನೆಗಾಗಿ ವೆಚ್ಚ ಮಾಡುತ್ತಿದೆ ಎಂದು ಸ್ಟಾಕ್‍ಹೋಂ ಇಂಟರ್ ನ್ಯಾಷನಲ್ ಪೀಸ್ ರೀಸರ್ಚ್ ಇನ್‍ಸ್ಟಿಟ್ಯೂಟ್ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ವಿವರಿಸಲಾಗಿದೆ.

ಅಗ್ರಸ್ಥಾನದಲ್ಲಿರುವ ಅಮೆರಿಕ ವಾರ್ಷಿಕವಾಗಿ 997 ಶತಕೋಟಿ ಡಾಲರ್ ಗಳನ್ನು ಸೇನೆಗೆ ವೆಚ್ಚ ಮಾಡುತ್ತಿದ್ದರೆ, ಚೀನಾ (314), ರಷ್ಯಾ (149), ಜರ್ಮನಿ (88) ಮತ್ತು ಭಾರತ (86 ಶತಕೋಟಿ) ನಂತರದ ಸ್ಥಾನಗಳಲ್ಲಿವೆ. ಬ್ರಿಟನ್, ಸೌದಿ ಅರೇಬಿಯಾ, ಉಕ್ರೇನ್, ಫ್ರಾನ್ಸ್ ಹಾಗೂ ಜಪಾನ್ ನಂತರದ ಸ್ಥಾನಗಳಲ್ಲಿದ್ದು, ವಾರ್ಷಿಕ 10 ಶತಕೋಟಿ ಡಾಲರ್ ವೆಚ್ಚ ಮಾಡುವ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ 29ನೇ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News