ಭಾರತ-ಪಾಕ್ ಉದ್ವಿಗ್ನತೆ: ಕುಸಿದ ಶೇರು ಮಾರುಕಟ್ಟೆ

Update: 2025-04-25 22:40 IST
ಭಾರತ-ಪಾಕ್ ಉದ್ವಿಗ್ನತೆ: ಕುಸಿದ ಶೇರು ಮಾರುಕಟ್ಟೆ

ಸಾಂದರ್ಭಿಕ ಚಿತ್ರ | PC : PTI

  • whatsapp icon

ಮುಂಬೈ: ಶೇರು ಮಾರುಕಟ್ಟೆ ಸೂಚ್ಯಂಕಗಳಾದ ನಿಫ್ಟಿಹಾಗೂ ಸೆನ್ಸೆಕ್ಸ್ ಶುಕ್ರವಾರ ಬೆಳಗ್ಗೆ ಭಾರೀ ಕುಸಿತವನ್ನು ಕಂಡವು. ಜಮ್ಮುಕಾಶ್ಮೀರದ ಫುಲ್ಗಾಂವ್‌ನಲ್ಲಿ ಭಯೋತ್ಪಾದಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ತಲೆದೋರಿರುವ ಉದ್ವಿಗ್ನತೆ ಶೇರು ಸೂಚ್ಯಂಕಗಳ ಕುಸಿತಕ್ಕೆ ಕಾರಣವೆಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಮುಂಬೈ ಶೇರುಮಾರುಕಟ್ಟೆಯ ಸೆನ್ಸೆಕ್ಸ್ 588.90 ಅಂಶಗಳಷ್ಟು ಕುಸಿತವನ್ನು ಕಂಡಿದ್ದು, 79,212.53ಕ್ಕೆ ತಲುಪಿದೆ ಹಾಗೂ ರಾಷ್ಟ್ರೀಯ ಶೇರುಮಾರುಕಟ್ಟೆ ಸೂಚ್ಯಂಕ ನಿಫ್ಟಿ 207.35 ಅಂಶಗಳಷ್ಟು ಅಥವಾ 0.86ರಷ್ಟು ಕುಸಿದಿದ್ದು, 24,039.35ಕ್ಕೆ ಕಲುಪಿದೆ.

ಆದಾನಿಪೋರ್ಟ್ಸ್, ಬಜಾಜ್ ಫೈನಾನ್ಸ್, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಪವರ್‌ಗ್ರಿಡ್ ಇತ್ಯಾದಿ ಹಲವು ಪ್ರಮುಖ ಕಂಪೆನಿಗಳ ಶೇರುಗಳ ಮೌಲ್ಯಗಳು ತೀವ್ರ ಕುಸಿತವನ್ನು ಕಂಡಿವೆ.

ಆದರೆ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ ಇನ್ಪೋಸಿಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ಗಳ ಶೇರುಗಳು ಏರಿಕೆಯನ್ನು ಕಂಡಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News