ಕೋವಿಡ್‌ನ 756 ಹೊಸ ಪ್ರಕರಣ ದಾಖಲು

Update: 2024-01-07 16:36 GMT

ಹೊಸದಿಲ್ಲಿ: ದೇಶದಲ್ಲಿ ಕೊವಿಡ್ನ 756 ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 4,049ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ರವಿವಾರ ತಿಳಿಸಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ತಲಾ 2, ಜಮ್ಮು ಹಾಗೂ ಕಾಶ್ಮೀರದಲ್ಲಿ 1 ಸಾವು ಸಂಭವಿಸಿರುವುದು ವರದಿಯಾಗಿದೆ ಎಂದು ರವಿವಾರ ಬೆಳಗ್ಗೆ 8 ಗಂಟೆಗೆ ಪರಿಷ್ಕೃತಗೊಂಡ ಆರೋಗ್ಯ ಸಚಿವಾಲಯದ ದತ್ತಾಂಶ ತಿಳಿಸಿದೆ. 2023 ಡಿಸೆಂಬರ್ 5ರಿಂದ ದಿನನಿತ್ಯದ ಪ್ರಕರಣಗಳ ಸಂಖ್ಯೆ ಎರಡಂಕೆಗೆ ಇಳಿಕೆಯಾಗಿತ್ತು. ಆದರೆ, ಹೊಸ ಪ್ರಬೇಧ ಜೆಎನ್.1 ಹಾಗೂ ಶೀತ ವಾತಾವರಣದಿಂದ ಮತ್ತೆ ಏರಿಕೆಯಾಗಿದೆ.

ಡಿಸೆಂಬರ್ 5ರ ಬಳಿಕ 2023 ಡಿಸೆಂಬರ್ 31ರಂದು ಒಂದೇ ದಿನ ಗರಿಷ್ಠ ಪ್ರಕರಣಗಳು ಏರಿಕೆಯಾಗಿರುವುದು ವರದಿಯಾಗಿದೆ. ಡಿಸೆಂಬರ್ 31ರಂದು 841 ಪ್ರಕರಣಗಳು ದಾಖಲಾಗಿವೆ.

ಈ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಿನವರು ಮನೆಯ ಐಸೋಲೇಶನ್ ನಲ್ಲೇ ಗುಣಮುಖರಾಗುತ್ತಿದ್ದಾರೆ. ‘‘ಪ್ರಸಕ್ತ ಲಭ್ಯವಿರುವ ದತ್ತಾಂಶದ ಪ್ರಕಾರ ಜೆಎನ್.1 ಉಪ ಪ್ರಬೇಧ ಹೊಸ ಪ್ರಕರಣಗಳ ಏರಿಕೆಗೆ ಅಥವಾ ಆಸ್ಪತ್ರೆಯಲ್ಲಿ ದಾಖಲಾಗುವ ಹಾಗೂ ಮರಣದ ಸಂಖ್ಯೆಯನ್ನು ಹೆಚ್ಚಿಸಿಲ್ಲ’’ ಎಂದು ಮೂಲಗಳು ತಿಳಿಸಿವೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News