ಫ್ರಾನ್ಸ್‌ ನಿಂದ 26 ರಫೇಲ್ ಯುದ್ಧ ವಿಮಾನ ಖರೀದಿಸಲಿರುವ ಭಾರತ

Update: 2025-04-09 20:27 IST
Rafale fighter jets

ಸಾಂದರ್ಭಿಕ ಚಿತ್ರ | PTI 

  • whatsapp icon

ಹೊಸದಿಲ್ಲಿ: ಭಾರತವು 26 ರಫೈಲ್ ಮರೈನ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ ನಿಂದ ಶೀಘ್ರದಲ್ಲಿ ಖರೀದಿಸಲಿದೆ.

ಈ ಒಪ್ಪಂದಕ್ಕೆ ಭದ್ರತೆ ಕುರಿತು ಸಂಪುಟ ಸಮಿತಿ ಅನುಮೋದನೆ ನೀಡಿದೆ ಎಂದು ಮೂಲಗಳು ಬುಧವಾರ ದೃಢಪಡಿಸಿವೆ. ಈ ನಡೆ ಸಮುದ್ರದಲ್ಲಿ ವಾಯು ಸಮರದ ಸಾಮರ್ಥ್ಯವನ್ನು ಸಬಲಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಅದು ಹೇಳಿದೆ.

ಈ ಖರೀದಿ ಒಪ್ಪಂದ ಸುಮಾರು 63,000 ಕೋಟಿ ರೂ. ಮೌಲ್ಯದ್ದಾಗಿದ್ದು, ಇದು ಇದುವವರೆಗಿನ ಅತ್ಯಧಿಕ ಮೌಲ್ಯದ ಖರೀದಿ. ಇದರಲ್ಲಿ 22 ಒಂದು ಆಸನದ ಹಾಗೂ 4 ಎರಡು ಆಸನದ ಶ್ರೇಣಿಗಳು ಸೇರಿದಂತೆ 26 ರಫೇಲ್ ಮರೈನ್ ಯುದ್ಧ ವಿಮಾನಗಳನ್ನು ಒಳಗೊಂಡಿವೆ.

ಸುಮಾರು ಅಂದಾಜು 62,700 ಕೋಟಿ ರೂ. ಮೌಲ್ಯದ 156 ಲಘು ಯುದ್ಧ ವಿಮಾನ ಪ್ರಚಂಡ್‌ ನ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಹಾಗೂ ಎಚ್‌ಎಎಲ್ ಇತ್ತೀಚೆಗೆ ಸಹಿ ಹಾಕಿದೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News