ಇಂದೋರ್: ಹೆಚ್ಚಿನ ಸಂಖ್ಯೆಯಲ್ಲಿ ನೋಟಾ ಮತಗಳನ್ನು ಚಲಾಯಿಸುವಂತೆ ಕಾಂಗ್ರೆಸ್ ಆಗ್ರಹ

Update: 2024-05-11 16:24 GMT

ಸಾಂದರ್ಭಿಕ ಚಿತ್ರ 

 

ಇಂದೋರ್ (ಮ.ಪ್ರ): ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯಾಗಿದ್ದ ಅಕ್ಷಯ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂದೆಗೆದುಕೊಂಡಿದ್ದು ಮಾತ್ರವಲ್ಲ,‌ ಬಿಜೆಪಿಗೆ ಸೇರ್ಪಡೆಗೊಂಡು ತನ್ನ ಗಾಯಕ್ಕೆ ಉಪ್ಪು ಸವರಿದ್ದರಿಂದ ಕ್ರುದ್ಧಗೊಂಡಿರುವ ಕಾಂಗ್ರೆಸ್ ಬಿಜೆಪಿಗೆ ಪಾಠ ಕಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ನೋಟಾ ಮತಗಳನ್ನು ಚಲಾಯಿಸುವಂತೆ ಜನರನ್ನು ಆಗ್ರಹಿಸಿದೆ.

ಕಾಂಗ್ರೆಸ್ ಕಳೆದ 35 ವರ್ಷಗಳಲ್ಲಿ ಇಂದೋರ್ ಲೋಕಸಭಾ ಸ್ಥಾನವನ್ನು ಒಂದು ಬಾರಿಯೂ ಗೆದ್ದಿಲ್ಲ,‌ ಆದರೆ ಇದೇ ಮೊದಲ ಬಾರಿಗೆ ಕಣದಲ್ಲಿ ಅದರ ಅಭ್ಯರ್ಥಿ ಇರುವುದಿಲ್ಲ. ಕ್ಷೇತ್ರದಲ್ಲಿ ಹಾಲಿ ಸಂಸದ ಶಂಕರ ಲಾಲ್ವಾನಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಮ್ ಕೊನೆಯ ಕ್ಷಣದಲ್ಲಿ ನಾಮಪತ್ರವನ್ನು ಹಿಂದೆಗೆದುಕೊಂಡಿದ್ದು, ಅದರ ಬೆನ್ನಲ್ಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಪಕ್ಷದ ಚಿಹ್ನೆಯೊಂದಿಗೆ ಸ್ಪರ್ಧಿಸಲು ತನ್ನ ಬದಲಿ ಅಭ್ಯರ್ಥಿ ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿದ ಬಳಿಕ ಕಾಂಗ್ರೆಸ್ ಪಕ್ಷವು ನೋಟಾ ಮತಗಳನ್ನು ಕ್ರೋಡೀಕರಿಸಲು ತೀವ್ರ ಅಭಿಯಾನವನ್ನು ನಡೆಸುತ್ತಿದೆ. ಚುನಾವಣೆಯಲ್ಲಿ ನೋಟಾ ಮತಗಳನ್ನು ಚಲಾಯಿಸಿ ಬಿಜೆಪಿಗೆ ಪಾಠ ಕಲಿಸುವಂತೆ ಅದು ಮತದಾರರನ್ನು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News