ಇಸ್ರೇಲ್: ನೆತನ್ಯಾಹು ಸರಕಾರದ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ

Update: 2024-01-08 17:37 GMT

ಬೆಂಜಮಿನ್ ನೆತನ್ಯಾಹು | Photo: NDTV 

ಟೆಲ್ಅವೀವ್: ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರಕಾರ ರಾಜೀನಾಮೆ ನೀಡಬೇಕು ಮತ್ತು ದೇಶದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಇಸ್ರೇಲ್ ನ ಸಂಸತ್ ಭವನದ ಹೊರಗೆ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ ಎಂದು `ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.

ಗಾಝಾದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ಸರಕಾರ ಸಕಾಲಿಕ ಕ್ರಮ ಕೈಗೊಳ್ಳಲು ವಿಫಲವಾಗಿದೆ ಮತ್ತು ಒತ್ತೆಯಾಳುಗಳನ್ನು ನಡು ನೀರಿನಲ್ಲಿ ಕೈಬಿಟ್ಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ನಿಷ್ಕ್ರಿಯವಾಗಿದೆ ಮತ್ತು ಇಸ್ರೇಲ್ ನ ಅಂತರಾಷ್ಟ್ರೀಯ ಪ್ರತಿಷ್ಠೆಗೆ ಹಾನಿಯೆಸಗಿದೆ. ಸರಕಾರ ಸಕಾಲಿಕ ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ವಿಭಿನ್ನ ಹೇಳಿಕೆ ನೀಡುವುದು, ಬಜೆಟ್ನ ಅನುದಾನವನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸುವುದಕ್ಕೇ ಗಮನ ನೀಡುತ್ತಿರುವ ಸರಕಾರ ಅಧಿಕಾರದಿಂದ ಕೆಳಗಿಳಿಯಬೇಕು. ತಕ್ಷಣ ಚುನಾವಣೆ ನಡೆಸಿ ಉಗ್ರವಾದಿಗಳನ್ನು ಹೊರಹಾಕಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಸಂಸತ್ ಭವನದ ಬಳಿ ರಸ್ತೆತಡೆ ನಡೆಸಿ ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದರು ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News