ಜೈಪುರ ಅನಿಲ ಟ್ಯಾಂಕರ್ ಅಪಘಾತ | ಮೃತರ ಸಂಖ್ಯೆ 17ಕ್ಕೇರಿಕೆ
Update: 2024-12-25 14:19 GMT
ಜೈಪುರ : ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಡಿ.20ರಂದು ರಾಸಾಯನಿಕಗಳು ತುಂಬಿದ್ದ ಲಾರಿಯೊಂದು ಅನಿಲ ಟ್ಯಾಂಕರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಭುಗಿಲೆದ್ದಿದ್ದ ಭಾರೀ ಬೆಂಕಿಯಿಂದ ತೀವ್ರ ಸುಟ್ಟ ಗಾಯಗಳಾಗಿದ್ದ ಇನ್ನೂ ಇಬ್ಬರು ಇಲ್ಲಿಯ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಇದರೊಂದಿಗೆ ಈ ದುರಂತದಲ್ಲಿ ಮೃತರ ಸಂಖ್ಯೆ 17ಕ್ಕೇರಿದೆ.
ಬುಧವಾರ ನಸುಕಿನಲ್ಲಿ ಓರ್ವ ಪುರುಷ ಮತ್ತು ಓರ್ವ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇತರ 16 ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಈ ಪೈಕಿ ಮೂವರ ಸ್ಥಿತಿ ಈಗಲೂ ಚಿಂತಾಜನಕವಾಗಿದೆ ಎಂದು ಎಸ್‌ಎಂಎಸ್ ಆಸ್ಪತ್ರೆಯ ಅಧೀಕ್ಷಕ ಸುಶೀಲ ಭಾಟಿ ಅವರು ತಿಳಿಸಿದರು.
ಘಟನೆ ಸಂಭವಿಸಿದ ದಿನ 11 ಜನರು ಮೃತಪಟ್ಟಿದ್ದರು.